ಕಾಸರಗೋಡು: ಜಾನುವಾರು ಸಾಕಣೆ ಕೇಂದ್ರದಿಂದ 1.25 ಲಕ್ಷ ರೂಪಾಯಿ ಮೌಲ್ಯದ ಯಂತ್ರಗಳು ಹಾಗೂ ಮೋಟಾರ್‌ಗಳನ್ನು ಕಳವುಗೈದು ಮಾರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೈದಕ್ಕಾಡ್ ನಿವಾಸಿ ಪ್ರಶಾಂತ್ (35), ಮಲ್ಲಕ್ಕರ ನಿವಾಸಿ ರಾಕೇಶ್ (35), ಪಿಲಿಕ್ಕೋಡ್ ಕೊದೋಳಿಯ ವಿ.ವಿ. ಸುರೇಶ್, ಸಿ.ಎಚ್. ಪ್ರಶಾಂತ್ (42), ಪಿಲಿಕೋಡ್ ಮಡಿವಯಲ್‌ನ ನಿತಿನ್ ಯಾನೆ ರಾಜೇಶ್ (36) ಎಂಬಿವರು ಚಂದೇರ ಎಸ್‌ಐ ಸತೀಶ್ ನೇತೃದ ಪೊಲೀಸ್‌ರ ತಂಡ ಬಂಧಿಸಿದೆ. ಕಾಲಿಕ್ಕಡವ್ ಕರಕ್ಕೇರು ಎಂಬಲ್ಲಿನ ರಾಮನ್ ಎಂಬವರ ಪುತ್ರ ಪಿ. ಪ್ರಮೋದ್ ಪಿಲಿಕ್ಕೋಡ್ ಕಣ್ಣಂಕೈಯಲ್ಲಿರುವ ಜಾನುವಾರು ಸಾಕಣೆ ಕೇಂದ್ರದಿಂದ ಹಾಲು ಕರೆಯಲು ಬಳಸುವ ಯಂತ್ರಗಳು ಹಾಗೂ ಮೋಟಾರ್‌ಗಳನ್ನು ಆರೋಪಿಗಳು ಕಳವು ನಡೆಸಿದರು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದಾಗ ಕಳವುಗೈದ ಸೊತ್ತುಗಳನ್ನು ಪಡನ್ನ ಗಣೇಶ್ ಮುಕ್‌ನ ಗುಜರಿ ಅಂಗಡಿಯಲ್ಲಿ ಮಾರಾಟಗೈದಿರು ವುದಾಗಿ ಪತ್ತೆಹಚ್ಚಲಾಗಿದೆ.
