ಕುಂಬಳೆ: ಶಾಂತಿಪಳ್ಳದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಲಾಟರಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಸೆರೆ ಹಿಡಿದಿದ್ದಾರೆ. ದೇವಿನಗರ ನಿವಾಸಿ ವಿಘ್ನೇಶ್ (26), ಶಾಂತಿಪಳ್ಳ ನಿವಾಸಿ ಶರಣ್ ಕುಮಾರ್ (39), ಸೂರಂ ಬೈಲು ನಿವಾಸಿ ಪ್ರವೀಣ್ ಕುಮಾರ್ (30)ನನ್ನು ನಿನ್ನೆ ಅಪರಾಹ್ನ ಶಾಂತಿಪಳ್ಳದಿಂದ ಸೆರೆ ಹಿಡಿಯ ಲಾಗಿದ್ದು ಇವರಿಂದ 2,44,800 ರೂ. ವಶಪಡಿಸಲಾಗಿದೆ. ಎಸ್‌ಐ ಕೆ. ಶ್ರೀಜೇಶ್, ಪ್ರೊಬೆಶನಲ್ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್, ಪೊಲೀಸರಾದ ಅನೂಪ್, ಪ್ರಜೀಶ್ ಸೆರೆ ಹಿಡಿದ ತಂಡದಲ್ಲಿದ್ದರು. ಇವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
