ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತ್ಯು

ಕಲ್ಲಿಕೋಟೆ:  ಇಲೆಕ್ಟ್ರಿಕ್ ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಸಂಭವಿಸಿದ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಇಂದು ಮುಂಜಾನೆ 2.30ರ ವೇಳೆ ಕೊಯಿಲಾಂಡಿಯಲ್ಲಿ  ಅಪಘಾತ ಸಂಭವಿಸಿದೆ.  ಅಪಘಾತ ಸಂಭವಿಸಿ ರುವುದಾಗಿ ಹೇಳಲಾಗುತ್ತಿದೆ. ಕಲ್ಲಿಕೋಟೆ  ಮಲಬಾರ್ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಾದ ಅವ್ಯಾನ್, ನಂದಕಿಶೋರ್, ಅಭಿನವ್ ಎಂಬಿ ವರು ಮೃತಪಟ್ಟವರಾಗಿ ದ್ದಾರೆಂದು ತಿಳಿದುಬಂದಿದೆ. ಮೃತದೇಹಗಳನ್ನು  ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸ ಲಾಗಿದೆ. ಮೂವರು ವಿದ್ಯಾರ್ಥಿ ಗಳೂ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು  ಪೊಲೀಸರು ತಿಳಿಸಿದ್ದಾರೆ. ಸ್ಕೂಟರ್‌ನ ಹಿಂಬದಿಗೆ ಬೇರೊಂದು ವಾಹನ ಢಿಕ್ಕಿ ಹೊಡೆ ದಿ ರುವುದಾಗಿಯೂ ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಭಾಗದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.  

You cannot copy contents of this page