ಎಂಡಿಎಂಎ ವಶ: ಯುಟ್ಯೂಬ್ ಇನ್‌ಫ್ಲುವೆನ್ಸರ್ ಸಹಿತ ನಾಲ್ವರ ಸೆರೆ

ಮಲಪ್ಪುರಂ: ಮಲಪ್ಪುರಂ ನಲ್ಲಿ  ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ವಶಪಡಿಸಿಕೊಂಡಿದ್ದು, ಈ ಸಂಬಂಧ ಸೋಶ್ಯಲ್ ಮೀಡಿಯಾ ಇನ್ ಫ್ಲುವೆನ್ಸರ್ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕೊಟ್ಟಿಲಂಗಾಡಿ ಕಾವುಂಗಲ್ ನಿವಾಸಿಯೂ ಇನ್‌ಫ್ಲುವೆನ್ಸರ್  ಆಗಿರುವ ಮಿನು ಜಾಸ್ಮಿನ್ (23), ಮಲಪ್ಪುರಂ ಹಾಜಿಯಾರ್‌ಪಳ್ಳಿ ನಿವಾಸಿ ಅನಸ್ (24), ಮಂಕಡ ನಿವಾಸಿ ಟಿ.ಪಿ.ಶಬೀರ್ (26), ವೇಂಙರ ಊರಕ ನಿವಾಸಿ ಸಜಾದ್ (21) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ.  ಆಪರೇಶನ್ ತೂಫಾನ್ ನಾರ್ಕೋ ಹಂಟ್    ಕಾರ್ಯಾಚರಣೆ ಅಂಗವಾಗಿ  ಪೊಲೀಸರು ನಡೆಸಿದ ತಪಾಸಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 10.5 ಗ್ರಾಂ ಎಂಡಿಎಂಎ, ಹಣ ಹಾಗೂ ಡಿಜಿಟಲ್ ತಕ್ಕಡಿಯನ್ನು ವಶಪಡಿಸಲಾಗಿದೆ.  ಸೆರೆಗೀಡಾದ ಈ ಮೂರು ಮಂ ದಿ ಈ ಹಿಂದೆಯೂ ಮಾದಕವಸ್ತು ಪ್ರಕರಣದಲ್ಲಿ ಆರೋಪಿಗಳಾ ಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page