2.81 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 2.81 ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ಮೂಲತಃ ಪುತ್ತಿಗೆ ಮುಗು ರಸ್ತೆ ಬಳಿಯ ದಾರುಲ್ ಇಸ್ಲಾಂ ಮಂಜಿಲ್  ನಿವಾಸಿ ಹಾಗೂ ಈಗ ಮೊಗ್ರಾಲ್ ಪೇರಾಲ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಶಹಜಾಸ್ ಎಸ್ (30) ಬಂಧಿತ ಆರೋಪಿ. ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್ ಎಂ, ಎಎಸ್‌ಐ ಅತುಲ್‌ರಾಮ್, ಅಜೆಯ್ ಎಸ್.ಪಿಯವರ  ಡಾನ್ಸಾಪ್ ತಂಡದ ಸದಸ್ಯರಾದ ನಿಜಿಲ್ ಕುಮಾರ್, ಅನೀಶ್ ಕುಮಾರ್ ಎಂಬಿವರನ್ನೊಳಗೊಂಡ ಪೊಲೀಸರ ತಂಡ ನಿನ್ನೆ ಪೇರಾಲ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು  ಮಾಲು ಸಹಿತ ಬಂಧಿಸಲಾಗಿದೆ.

RELATED NEWS

You cannot copy contents of this page