ಉಪ್ಪಳ: ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಕಚೇರಿಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ದೀಪ ಬೆಳಗಿಸಿ ಉದ್ಘಾ ಟಿಸಿ ದರು. ಚಂದ್ರಹಾಸ ಬೆಜ್ಜ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಮುಖಂಡರಾದ ಸುನಿಲ್ ಪಿ.ಆರ್, ಮಾಧು ಒಳಪಿಲ್, ಮಣಿ ಕಂಠ ರೈ, ಎ.ಕೆ ಕಯ್ಯಾರ್, ಲೋಕೇಶ್, ಕೃಷ್ಣ ನಾವಡ, ಬೆಜ್ಜ ಕೃಷ್ಣ, ನಾರಾಯಣ ನಾಯ್ಕ್, ಶಾಲಿನಿ, ಜ್ಯೋತಿ, ಸಂತೋಷ್ ದೈಗೋಳಿ, ಪದ್ಮನಾಭ ರೈ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. ಭಟ್ ವಂದಿಸಿದರು.







