ಮೀಂಜ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್‌ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಪಂಚಾಯತ್ ಮಾರ್ಕೆಟ್ ಹಾಲ್‌ನಲ್ಲಿ, ಬ್ಯಾಂಕದನ ಅಧ್ಯಕ್ಷ ರಘುನಾಥ ಶೆಟ್ಟಿ ಕೊಮ್ಮಂಗಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕ್‌ನ ವಾರ್ಷಿಕ ವರದಿ, ಲೆಕ್ಕಪತ್ರಗಳು, ವ್ಯವಹಾರಗಳು ಹಾಗೂ ಪ್ರಗತಿಯ ವಿವರಗಳನ್ನು ಮಂಡಿಸಲಾಯಿತು. ಬ್ಯಾಂಕ್‌ನ ವಿವಿಧ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. 2025-26ನೇ ಸಾಲಿನ 10ನೇ ತರಗತಿ ಹಾಗೂ ದ್ವಿತೀ ಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗ ಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮೀಯಪದವಿನ ಹಿರಿಯ ಹಾಗೂ ಡಾ| ಎಸ್. ಎನ್. ಭಟ್‌ರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ. ಎಸ್. ಎನ್. ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಪಂ. ಮಾಜಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪಂ. ಮಾಜಿ ಸದಸ್ಯ ಮೊಹಮ್ಮದ್ ಕುಂಞÂ, ಮಾಸ್ಟರ್ಸ್ ಕ್ಲಬ್ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಹಾಗೂ ನಿವೃತ್ತ ಶಿಕ್ಷಕ ದಾಮೋದರ ಕಬ್ಬಿನಹಿತ್ಲು ಶುಭಹಾರೈಸಿದರು. ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕ್‌ನ ಕಾರ್ಯದರ್ಶಿ ಜಯಶ್ರೀ ಕೆ. ಟಿ. ಸ್ವಾಗತಿಸಿ, ಮೇಘಶ್ರೀ ಬಜೆಟ್ ಮಂಡಿಸಿದರು. ನೇತಾಜಿ ರೈ ವಂದಿಸಿದರು.






