ಪೆರ್ಲ: ಪೇಟೆಯಲ್ಲಿ ಹಲವಾರು ವರ್ಷಗಳ ಕಾಲ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ ಪೆರ್ಲ ನಿವಾಸಿ ಕೃಷ್ಣ ಪೈ ಬಜಕೂಡ್ಲು (68) ನಿಧನ ಹೊಂದಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕದ ಅಧ್ಯಕ್ಷರಾಗಿದ್ದರು. ಇವರ ಪತ್ನಿ ಮಮತ ಪೈ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ದೇವಾ ನಂದ, ಜಯದೇವ, ಆದಿತ್ಯ, ಸೊಸೆ ಯಂದಿರಾದ ಆಬಾ, ರಾಧಿಕ, ಸಹೋದರಿ ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನದ ಶೋಕಾರ್ಥ ನಿನ್ನೆ ಪೆರ್ಲ ಪೇಟೆಯಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಅಂಗಡಿ ಮುಚ್ಚಿ ಸಂತಾಪ ಸೂಚಿಸಲಾಯಿತು.







