ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಂದಾಯ ವಿಭಾಗೀಯ ಕಚೇರಿ (ಆರ್.ಡಿ.ಒ)ವನ್ನು ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯ ಕಂದಾಯ ಖಾತೆ ಸಚಿವ ಕೆ. ರಾಜನ್ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು.
ರಿ-ಬಿಲ್ಡ್ ಕೇರಳ ಯೋಜನೆಯಲ್ಲಿ ಒಳಪಡಿಸಿ ಆರ್‌ಡಿಒ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. 2020-21ನೇ ಆರ್ಥಿಕ ವರ್ಷದ ರೀ-ಬಿಲ್ಡ್ ಕೇರಳ ಇನ್‌ಸ್ಸೆಂಟೀವ್ ನಿಧಿಯಿಂದ ೪ ಕೋಟಿ ರೂ. ಈ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದು 1052.39 ಸ್ಕ್ವಾರ್ ಫೀಟ್‌ನ ದ್ವಿ ಅಂತಸ್ತಿನ ಕಟ್ಟಡವಾಗಿದೆ. ಇದರ ಕೆಳ ಅಂತಸ್ತಿನಲ್ಲಿ ಫ್ರಂಟ್ ಆಫೀಸ್, ಕೋರ್ಟ್ ಹಾಲ್, ಆರ್‌ಡಿಒ ಚೇಂಬರ್, ಕಚೇರಿ ಕೊಠಡಿಗಳು, ಎರಡನೇ ಅಂತಸ್ತಿನಲ್ಲಿ ರೆಕಾರ್ಡ ರೂಂ ಮತ್ತು ಆರ್‌ಡಿಒ ಕ್ವಾರ್ಟರ್ಸ್‌ಗಳು ಹೊಂದಿವೆ. ಆರ್‌ಡಿಒ ಕಚೇರಿ ಈ ತನಕ ಕಾಸರಗೋಡು ರೈಲು ನಿಲ್ದಾಣ ಸಮೀಪದ ಕಟ್ಟಡದಲ್ಲಿ ಕಾರ್ಯವೆಸಗುತ್ತಿತ್ತು.