ಕಾಸರಗೋಡು: ಕಂದಾಯ ಜಿಲ್ಲಾ ವಿಜ್ಞಾನಮೇಳ ಹಾಗೂ ಪಯ್ಯನ್ನೂರು ವಲಯ ವೊಕೇಶನಲ್ ಹೈಯರ್ ಸೆಕಂಡರಿ ವಿದ್ಯಾರ್ಥಿಗಳಿಗಿರುವ ಸ್ಕಿಲ್ ಟೆಸ್ಟ್, ನಾಯಮ್ಮಾರಮೂಲೆ ತನ್ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ಆರೋಗ್ಯ ಸಚಿವ ಕೆ. ಮುರಳೀಧರನ್ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಮೇಳ ಲಾಂಛನವನ್ನು ಸಿದ್ಧಪಡಿಸಿದ ವ್ಯಕ್ತಿಯನ್ನು ಅಭಿನಂದಿಸಿದರು. ಮೇಳದಲ್ಲಿ ಕಂದಾಯ ಜಿಲ್ಲೆಯ 7 ಉಪಜಿಲ್ಲೆಗಳಿಂದಾಗಿ 35೦೦ರಷ್ಟು ಪ್ರತಿಭೆಗಳು ಭಾಗವಹಿಸುತ್ತಿದ್ದು, ಎರಡು ದಿನ ಮೇಳ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ. ಶಫೀಕ್, ಬ್ಲೋಕ್ ಪಂ. ಅಧ್ಯಕ್ಷ ಸಿ.ಎ. ಅಬ್ದುಲ್ಲಕುಂಞಿ, ಚೆಂಗಳ ಪಂ. ಅಧ್ಯಕ್ಷ ವಸಂತನ್ ಅಜಕ್ಕೋಡ್, ಎ.ಎ. ಶಿಹಾಬುದ್ದೀನ್, ಇ.ಆರ್. ಉದಯಕುಮಾರಿ ಸಹಿತ ಹಲವರು ಭಾಗವಹಿಸಿದರು.







