ಅಯ್ಯಪ್ಪ ಸಂಗಮದ ಬೆನ್ನಲ್ಲೇ ಅಲ್ಪಸಂಖ್ಯಾತ ಸಂಗಮ: ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದ ಮುಸ್ಲಿಂ ಲೀಗ್;  ಚುನಾವಣೆ ವೇಳೆಯಲ್ಲೇ ಸರಕಾರದಿಂದ ಓಲೈಕೆ ಯತ್ನದ ಆರೋಪ

ತಿರುವನಂತಪುರ:  ಪಂಪಾದಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಅಲ್ಪಸಂ ಖ್ಯಾತ ಸಂಗಮ ಕಾರ್ಯಕ್ರಮ ನಡೆಸುವ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಇದರ ದಿನಾಂಕವನ್ನು ನಿಗದಿಪಡಿಸಲಾಗದಿದ್ದರೂ ಅದನ್ನು ಕೊಚ್ಚಿಯಲ್ಲಿ ನಡೆಸಲು ಸರಕಾರ ಉದ್ದೇಶಿಸಿದೆ. ಅಲ್ಪಸಂಖ್ಯಾತ ಸಂಗಮ ನಡೆಸುವ ಸರಕಾರದ ತೀರ್ಮಾನವನ್ನು ವಿರೋಧಿಸಿ ಮುಸ್ಲಿಂ ಲೀಗ್ ರಂಗಕ್ಕಿಳಿದಿದೆ.

ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಾಜಕೀಯ ಲಾಭಕ್ಕಾಗಿ ಸರಕಾರ ನಡೆಸುವ ಕೇವಲ ಒಂದು ಗಿಮಿಕ್ ಮಾತ್ರವೇ ಆಗಿದೆ ಇದು. ಆದ್ದರಿಂದ ಅದನ್ನು ವಿರೋಧಿಸುವ ನಿಲುವನ್ನು ಮುಸ್ಲಿಂ ಲೀಗ್ ಕೈಗೊಂಡಿದೆ. ಮುಸ್ಲಿಂ ಲೀಗ್‌ನಿಂದ ಬೇರ್ಪಟ್ಟು ನಿಂತಿರುವ ಇತರ ಮುಸ್ಲಿಂ ಸಂಘಟನೆಗಳ ಬೆಂಬಲವನ್ನು ತನ್ನತ್ತ ಸೆಳೆದು ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮತೀಯ ಅಲ್ಪಸಂಖ್ಯಾತರ ಗರಿಷ್ಠ ಪ್ರಮಾಣದ ಮತಗಳನ್ನು ತಮ್ಮ ಬುಟ್ಟಿಯೊಳಗಾಗಿಸುವುದೇ ಸರಕಾರ ಮತೀಯ ಅಲ್ಪ ಸಂಖ್ಯಾತ ಸಂಗಮ  ನಡೆಸುವುದರ ಉದ್ದೇಶವಾಗಿದೆ ಎಂದು ಇತರ ವಿರೋಧ ಪಕ್ಷಗಳೂ ಇದಕ್ಕೆ ಪ್ರತಿಕ್ರಿಯೆ ನೀಡತೊಡಗಿವೆ.

ಅಯ್ಯಪ್ಪ ಸಂಗಮದ ಮೂಲಕ ಬಹುಸಂಖ್ಯಾತರ ಹಾಗೂ ಅಲ್ಪಸಂ ಖ್ಯಾತ ಸಂಗಮದ ಮೂಲಕ ಅಲ್ಪ ಸಂಖ್ಯಾತರನ್ನು ಓಲೈಸುವ ನೀತಿಯನ್ನು ಸರಕಾರ ತಳೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸತೊಡಗಿವೆ. ಆದರೆ  ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿಲ್ಲ. ‘2031ರಲ್ಲಿ ಕೇರಳ ಹೇಗೆ?’ ಎಂಬ ವಿಷಯದಲ್ಲಿ ಸರಕಾರದ ವಿವಿಧ ಇಲಾಖೆಗಳ ನೇತೃತ್ವ ದಲ್ಲಿ ಒಟ್ಟು ೩೩ ವಿಚಾರಗೋ ಷ್ಠಿಗಳನ್ನು ನಡೆಸಲು ರಾಜ್ಯ ಸಚಿವಸಂಪುಟ ತೀರ್ಮಾ ನಿಸಿದೆ. ಆ ಪೈಕಿ ಅಲ್ಪ ಸಂಖ್ಯಾತ ಇಲಾ ಖೆಯ ವಿಚಾರಗೋಷ್ಠಿ ಯನ್ನು ಕೊಚ್ಚಿ ಯಲ್ಲಿ ನಡೆಸಲು ತೀರ್ಮಾನಿಸ ಲಾಗಿದೆ. ಇದರಲ್ಲಿ ಯಾವುದೇ ರೀತಿಯ ಓಲೈಕೆ ನೀತಿ ಅಡಗಿಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ.

You cannot copy contents of this page