ಮಂಜೇಶ್ವರ ಬ್ಲೋಕ್ ಪಂಚಾಯತ್ ಪಿಎಂಎವೈ ನಿಧಿ ಅವ್ಯವಹಾರ: ಕಾನೂನು ಕ್ರಮದಲ್ಲಿ ಲೋಪ ಉಂಟಾಗಿದೆ – ಅಧ್ಯಕ್ಷ ಆರೋಪ

ಕುಂಬಳೆ: ಮಂಜೇಶ್ವರ ಬ್ಲೋಕ್ ಪಂಚಾಯತ್ ಪಿಎಂಎವೈ ವಸತಿ ಯೋಜನೆಯಲ್ಲಿ ೧೫ ಫಲಾನುಭವಿಗಳಿಗೆ ಲಭಿಸಬೇಕಾದ ಬ್ಲೋಕ್ ಪಂಚಾಯತ್ ಪಾಲು ನೌಕರ ಸ್ವಂತ ಖಾತೆಗೆ ವರ್ಗಾಯಿಸಿದ ಘಟನೆಯಲ್ಲಿ ನೌಕರನ ವಿರುದ್ಧದ ಕಾನೂನು ಕ್ರಮದಲ್ಲೂ ಲೋಪ ಉಂಟಾಗಿದೆ ಎಂದು ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಆರೋಪಿಸಿದ್ದಾರೆ. ಓರ್ವನಿಗೆ 1.12 ಲಕ್ಷ ರೂ.ನಂತೆ ಒಟ್ಟು 16.6೦ ಲಕ್ಷ ರೂ.ವನ್ನು  ಅಕ್ರಮ ವ್ಯವಹಾರದ ಮೂಲಕ ವರ್ಗಾಯಿಸಲಾಗಿದೆ ಎಂದು ಪ್ರಾಥಮಿಕ ತಪಾಸಣೆಯಿಂದ ಪತ್ತೆಹಚ್ಚಲಾಗಿದೆ. ಪಿಎಂಎವೈ ಸೆಕ್ಷನ್‌ನ ಕ್ಲರ್ಕ್ ರಾಮ್‌ದಾಸ್ ಅವ್ಯವಹಾರ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಫಲಾನುಭವಿಗಳ ಯಾದಿಯಲ್ಲಿ ಹೆಸರು ಹಾಗೂ ಇತರ ಮಾಹಿತಿಗಳನ್ನು ದಾಖಲಿಸಿದ ಬಳಿಕ ಬ್ಯಾಂಕ್ ಖಾತೆ ವಿವರಗಳಲ್ಲಿ ಬದಲಾವಣೆ ಮಾಡಿ ಸ್ವಂತ ಖಾತೆಗೆ ಸೇರಿಸಿ ಹಣ ವರ್ಗಾಯಿಸಿರುವು ದಾಗಿ ಪತ್ತೆಹಚ್ಚಲಾಗಿದೆ. 15 ಮಂದಿಯ ಪಾಲನ್ನು ಈ ರೀತಿ ಲಪಟಾಯಿಸಲಾಗಿದೆ. ಬ್ಲೋಕ್ ಪಂಚಾಯತ್ ಕಾರ್ಯದರ್ಶಿಯ ತಪಾಸಣೆಯಲ್ಲಿ ಅವ್ಯವಹಾರ ಗಮನಕ್ಕೆ ಬಂದಿದೆ.

2025 ಎಂಬುದು ದಾಖಲೆಯಲ್ಲಿ 2026 ಎಂದು ತಿದ್ದಿ ಬರೆದಿರುವುದು ಶಂಕೆಗೆ ಕಾರಣವಾಗಿದ್ದು, ಬಳಿಕ ನಡೆಸಿದ ಸಮಗ್ರ ತನಿಖೆಯಲ್ಲಿ ಅವ್ಯವಹಾರ ಪತ್ತೆಯಾಗಿದೆ ಎಂದು ಸೈಫುಲ್ಲಾ ತಂಙಳ್ ತಿಳಿಸಿದ್ದಾರೆ. ಆ ಕೂಡಲೇ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿದೆ.  ಹಣವನ್ನು ಹಿಂಪಾವತಿ ಮಾಡುವುದಾಗಿ ನೌಕರ ಹಾಗೂ ಪತ್ನಿ, ಇನ್ನೋರ್ವ ಖಚಿತಪಡಿಸಿರುವು ದಾಗಿಯೂ, ಇದರಂಗವಾಗಿ ನೌಕರ ೧ ಲಕ್ಷ ರೂ. ಮರುಪಾವತಿಸಿರುವುದಾಗಿಯೂ ಅಧ್ಯಕ್ಷ ತಿಳಿಸಿದ್ದಾರೆ. ಬಾಕಿ ಮೊತ್ತ ಪಾವತಿಸಲು, ಘಟನೆಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಸ್ವೀಕರಿಸಲು ಆಗ್ರಹಿಸಲಾಗಿದೆ. ಆರ್ಥಿಕ ಅವ್ಯವಹಾರಗಳಲ್ಲಿ ಆರೋಪಿತರಾದವರನ್ನು ಜಿಲ್ಲೆಗೆ ವರ್ಗಾವಣೆ ಮಾಡುವುದರ ಮೂಲಕ ಜಿಲ್ಲೆ ಹಾಗೂ ಇಲ್ಲಿನ ಸ್ಥಳೀಯಾ ಡಳಿತ ಸಂಸ್ಥೆಗಳೊಂದಿಗೆ ತಾರತಮ್ಯ ನೀತಿ ತೋರಿಸುವ ರೀತಿ ಹೆಚ್ಚುತ್ತಿರುವು ದಾಗಿಯೂ ಇದನ್ನು ಕೊನೆಗೊಳಿಸ ಬೇಕೆಂದು ಅವರು ನುಡಿದರು.

ಈ ಹಿಂದಿನ ಕ್ರಮಗಳನ್ನು ಮರೆಮಾಚಿ ನೇಮಕಾತಿ ನೀಡಿರುವುದರಲ್ಲಿ ಡೈರೆಕ್ಟ್ರೇಟ್‌ಗೆ ಲೋಪವುಂಟಾಗಿದೆ ಎಂದು, ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಅಧ್ಯಕ್ಷ ಆಗ್ರಹಿಸಿದ್ದಾರೆ. ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಕಮಲಾಕ್ಷೀ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಮೋಹನ್ ರೈ, ಸದಸ್ಯ ಅಸೀಸ್ ಮರಿಕೆ ಭಾಗವಹಿಸಿದರು.

You cannot copy contents of this page