ಮುಂಡಿತ್ತಡ್ಕ: ಇಲ್ಲಿಗೆ ಸಮೀಪ ಗುಣಾಜೆ ಎಂಬಲ್ಲಿರುವ ನಾಗನ ಕಟ್ಟೆ, ಗುಳಿಗನ ಕಲ್ಲಿಗೆ ಕಿಡಿಗೇಡಿಗಳು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ನಾಗನಕಟ್ಟೆಯಲ್ಲಿರುವ ಗುಳಿಗನ ಕಟ್ಟೆಗೆ ಕಲ್ಲೆಸೆದ ಸ್ಥಿತಿಯಲ್ಲಿ ಕಂಡು ಬಂದಿದೆ. ಅಲ್ಲದೆ ಕಟ್ಟೆ ಸಮೀಪವಿರುವ ಕಾಣಿಕೆ ಹುಂಡಿಯ ಕಟ್ಟೆಯಲ್ಲಿರುವ ನಾಗನ ಚಿತ್ರವನ್ನು ಹಾನಿಗೊಳಿಸಲಾಗಿದೆ. ನಿನ್ನೆ ರಾತ್ರಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಇದು ಸ್ಥಳೀಯರ ಗಮನಕ್ಕೆ ಬಂದಿದೆ.
