ಕಾಸರಗೋಡು: ನಾಪತ್ತೆಯಾದ ವೃದ್ದ ನೇಣು ಬಿಗಿದು ಮೃತಪಟ್ಟ ಸ್ಥಿತಿ ಯಲ್ಲಿ ಮೃತದೇಹ ಪತ್ತೆಯಾಗಿದೆ. ಬೇಡಡ್ಕ ಕೊಳತ್ತೂರು ನಿವಾಸಿ ಕೃಷಿಕ ಇ. ಕುಮಾರನ್ ನಾಯರ್ (83) ಮೃತಪಟ್ಟವರು. ಇವರ ಮೃತದೇಹ ಮನೆಯ ಸಮೀಪ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ದಿಂದ ಇವರು ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಜಾನಕಿ, ಮಕ್ಕಳಾದ ಸತಿ, ಸುಜಾತ, ಸುನಿಲ್, ಅಳಿಯಂದಿರಾದ ಅರವಿಂದಾಕ್ಷನ್, ಚಂದ್ರನ್, ಸೊಸೆ ಪ್ರಮೀಳ, ಸಹೋದರಿಯರಾದ ಪೊನ್ನಮ್ಮ, ಚೋಯಿಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
