ಉಪ್ಪಳ: ನಾಪತ್ತೆಯಾಗಿದ್ದ ಯುವಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವರ್ಕಾಡಿ ಬಟ್ಯಡ್ಕ ನಿವಾಸಿ ದಿ| ಪೂವಪ್ಪ ಬೆಳ್ಚಾಡರ ಪುತ್ರ ಗಣೇಶ್ ಬಿ (35) ಮೃತಪಟ್ಟ ವ್ಯಕ್ತಿ. ಸೆಂಟ್ರಿಂಗ್ ಕಾರ್ಮಿಕನಾಗಿದ್ದ ಇವರು ನವಂಬರ್ 20ರಂದು ಮುಂಜಾ ನೆಯಿಂದ ನಾಪತ್ತೆಯಾಗಿದ್ದರು. ನಿನ್ನೆ ಕೂಡಾ ಇವರು ಮನೆಗೆ ತಲುಪದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ನೆರೆಮನೆಯ ಬಾವಿ ಸಮೀಪ ಗಣೇಶರ ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಬಾವಿಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಊರವರು ಮೇಲೆತ್ತಿ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.
ಗಣೇಶರ ತಾಯಿ ವೇದಾವತಿ ಒಂದು ತಿಂಗಳ ಹಿಂದೆ ನಿಧನಹೊಂ ದಿದ್ದಾರೆ. ಮೃತ ಗಣೇಶ್ ಸಹೋದರ ಗಿರಿಧರ, ಸಹೋದರಿ ಸುಪ್ರೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






