ಅಣಂಗೂರಿನಿಂದ ಹೊಸ ಬಸ್ ನಿಲ್ದಾಣವರೆಗೆ ವನ್‌ವೇ ಏರ್ಪಡಿಸಲು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹ

ಕಾಸರಗೋಡು: ನಗರದ ಸಂಚಾರ ತಡೆ ಸಮಸ್ಯೆ ಪರಿಹಾರಕ್ಕಾಗಿ ಅಣಂಗೂರಿನಿಂದ ಹೊಸ ಬಸ್ ನಿಲ್ದಾಣದವರೆಗೆ ವನ್‌ವೇ ವ್ಯವಸ್ಥೆ ಏರ್ಪಡಿಸಬೇಕೆಂದು ಶಾಸಕ ಕಲ್ಲಟ್ರ ಮಾಹಿನ್ ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವುದಕ್ಕಾಗಿ  ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕ ಈ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಾಧಿಕಾರದ ಸಭೆ ಮುಂದಿನ ತಿಂಗಳು ಮೊದಲ ವಾರದಲ್ಲಿ ನಡೆಸುವುದಕ್ಕಾಗಿ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ನಗರದ ಸಾರಿಗೆ ತಡೆ ಪರಿಹರಿಸಲು ತುರ್ತು ಕ್ರಮ ಅನಿವಾರ್ಯವೆಂದು ಶಾಸಕರು ತಿಳಿಸಿದ್ದಾರೆ. ಹೆದ್ದಾರಿಯ ಮೂಲಕ ತೆರಳಬೇಕಾದ ವಾಹನಗಳು ನಗರ ಪ್ರವೇಶಿಸುವುದನ್ನು ನಿಯಂತ್ರಿಸಬೇಕೆಂದು ಅವರು ಆಗ್ರಹಿಸಿದರು. ನಗರದ ರಸ್ತೆಗಳ ಅಗಲೀಕರಣಕ್ಕೆ ಸಂಬಂಧಿಸಿ ಸ್ಥಳ ಬಿಟ್ಟುಕೊಡಬೇಕಾದ ವ್ಯಕ್ತಿಗಳನ್ನು, ಟ್ರಾಫಿಕ್ ಅಧಿಕಾರಿಗಳನ್ನು ಸೇರಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕೈಗೊಂಡು ಅಗತ್ಯದ ಚರ್ಚೆಗಳ ಬಳಿಕ ಮುಂದಿನ ಕ್ರಮ ಸ್ವೀಕರಿಸುವುದಾಗಿ ಕಾಸರಗೋಡು ನಗರಸಭಾ ಕಾರ್ಯದರ್ಶಿ ಸಭೆಯಲ್ಲಿ ತಿಳಿಸಿದ್ದಾರೆ.

You cannot copy contents of this page