ಹೊಸಂಗಡಿ: ಕೇರಳ ರಾಜ್ಯ ಹೊಲಿಗೆ ಕಾರ್ಮಿಕರಿಗೆ ಟೆÊಲರಿಂಗ್ ವೆಲ್ಫೇರ್ ಫಂಡ್ ಕಾಯ್ದೆ ಪ್ರಕಾರ ಕ್ಷೇ ಮನಿಧಿಯಲ್ಲಿ ನೋಂದಾಯಿಸಿ ಕೊಂಡರೂ ಪರಿಷ್ಕೃತ ಕಾನೂನು ವಿಧೇಯ ಪಿಂಚಣಿ ದೊರೆಯದೆ ಇರುವ ಸಮಸ್ಯೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ಶಾಸಕ ಎಕೆಎಂ ಅಶ್ರಫ್ ಭರವಸೆ ಇತ್ತರು. ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆದ ಕೇರಳ ಸ್ಟೇಟ್ ಟÉÊಲರ್ಸ್ ಅಸೋಸಿಯೇಷನ್ (ಕೆಎಸ್ಟಿಎ) ಮಂಜೇಶ್ವರ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇಮನಿಧಿ ಯೋಜನೆಯಲ್ಲಿ ಸೀನಿಯಾರಿಟಿಯಂತೆ ಪಿಂಚಣಿ ನೀಡುವ ವ್ಯವಸ್ಥೆ ಅಳವಡಿಸಿಲ್ಲ, ಅನುಗುಣವಾದ ಪಿಂಚಣಿ ಲಭಿಸುತ್ತಿಲ್ಲ ಎಂದು ಹೊಲಿಗೆ ಕಾರ್ಮಿಕರು ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಕ್ಷೇಮನಿಧಿ ಕಚೇರಿಯು ಸಮರ್ಪಕ ಕಾರ್ಯ ನಿರ್ವಹಿಸದೆ ಟೈಲರಿಂಗ್ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದೆ. ಜತೆಯಲ್ಲೇ ರೆಡಿಮೇಡ್ ಬಟ್ಟೆಬರೆಗಳಿಗೆ ತೆರಿಗೆಗಳಿಲ್ಲದೆ ಮಾರಾಟವಾಗುವುದರಿಂದ ಟೈಲರಿಂಗ್ ವೃತ್ತಿ ಕ್ಷೇತ್ರವೇ ಆತಂಕದಲ್ಲಿದೆ ಎಂದು ಸಮ್ಮೇಳನ ಅಭಿಪ್ರಾಯಪಟ್ಟಿದೆ.
ಕೆಎಸ್ಟಿಎ ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಯು. ಶಂಕರನ್, ರಾಜ್ಯ ಕಾರ್ಯದರ್ಶಿ ಮೋಹನ್ ದಾಸ್ ಕುಂಬಳೆ, ಜಿಲ್ಲಾಧ್ಯಕ್ಷ ಹಾಗೂ ವೆಲ್ಫೇರ್ ಮಂಡಳಿ ಸದಸ್ಯ ಸುರೇಶ್ ಭಟ್, ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್ ಅತಿಥಿಗಳಾಗಿ ಪಾಲ್ಗೊಂಡರು.
ಸAಘಟನಾ ಪ್ರಮುಖರಾದ ನಾರಾಯಣ ಕುಂಬಳೆ, ಗಣೇಶ್ ಪಾವೂರು, ಚಂದ್ರನ್ ಪೆರ್ಲ, ಕೇಶವ ಮಯ್ಯ, ವಿನೋದ್ ಕುಂಬಳೆ, ಶುಭಾಶಂಸನೆ ಮಾಡಿದರು. ತಾಲೂಕು ಘಟಕ ಅಧ್ಯಕ್ಷ ದಯಾನಂದ ಪಿ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಎಂ. ಸತೀಶ ಆಚಾರ್ಯ ವರದಿ ಮಂಡಿಸಿದರು. ವಿಜಯ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಸಂತೋಷ ಶೆಟ್ಟಿ ವಂದಿಸಿದರು.







