ಮಂಜೇಶ್ವರ: ಮಂಜೇಶ್ವರ ಅಭಿವೃದ್ಧಿ ಹೊಂದದಿರಲು ಕಾರಣ ಯಾರು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಮಂಜೇಶ್ವರದ ಜನತೆ ಎಲ್ಲಾ ಕಾರ್ಯಕ್ಕೂ ಮಂಗಳೂರನ್ನೇ ಅವಲಂಭಿಸುತ್ತಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ, ಕ್ರೀಡೆ, ವ್ಯಾಪಾರ, ವ್ಯವಹಾರ ಎಲ್ಲದಕ್ಕೂ ಮಂಗಳೂರಿಗೆ ತೆರಳಬೇಕಾಗುತ್ತಿದೆ. ಮಂಜೇಶ್ವರದಿಂದ ಜಯ ಗಳಿಸುವ ಶಾಸಕರು ಮಂಜೇಶ್ವರದ ಅಭಿವೃದ್ಧಿಗೆ ಯಾಕೆ ಶ್ರಮಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಮಂಜೇಶ್ವರ ಪಂಚಾಯತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಯಾದವ ಬಡಾಜೆ, ಸುರೇಶ್ ಕುಂಜತ್ತೂರು, ಜಯಂತಿ ಶೆಟ್ಟಿ ಭಾಗವಹಿಸಿದರು.







