ಹೊಸದುರ್ಗ: ಕಾರಿನಲ್ಲಿ ಸಾಗಿಸುತ್ತಿದ್ದ 41 ಬಾಟ್ಲಿ ಭಾರತ ನಿರ್ಮಿತ ವಿದೇಶ ಮದ್ಯ ಸಹಿತ ಯುವಕ ಸೆರೆಯಾಗಿದ್ದಾನೆ. ಚೆರುವತ್ತೂರು, ತುರುತ್ತಿ, ಕೈದಕ್ಕಾಡ್ ಪುದಿಯ ಪುರದಲ್ಲಿನ ನಿವಾಸಿ ಪಿ.ಪಿ. ಶಶಿ (46)ನನ್ನು ಜಿಲ್ಲಾ ನಾರ್ಕೋಟಿಕ್ ಸೆಲ್‌ನ ಅಧೀನದಲ್ಲಿರುವ ಡಾನ್ಸಾಪ್ ತಂಡ ಸೆರೆ ಹಿಡಿದು ಚಂದೇರ ಪೊಲೀಸರಿಗೆ ಹಸ್ತಾಂತರಿಸಿದೆ. ನಿನ್ನೆ ರಾತ್ರಿ ಕೈದಕ್ಕಾಡ್ ಕುಳಂಙೋಟ್‌ಮಲ ಎಂಬಲ್ಲಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಈ ಸಮಯದಲ್ಲಿ ಈ ದಾರಿಯಾಗಿ ಪೊಲೀಸ್ ತಂಡ ಸಂಚರಿಸಿದ್ದು, ಕಾರಿನೊಳಗೆ ತಪಾಸಣೆ ನಡೆಸಿದಾಗ 500 ಮಿಲ್ಲಿ ಲೀಟರ್‌ನ 41 ಬಾಟ್ಲಿ ವಿದೇಶ ಮದ್ಯ ಪತ್ತೆಯಾಗಿದೆ. ಕಾರಿನಲ್ಲಿ ಸಂಚರಿಸಿ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿ ಸೆರೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






