ಮಲಪ್ಪುರಂ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ತಾಯಿ ಹಾಗೂ ಎರಡನೇ ತಂದೆಗೆ 180 ವರ್ಷ ಕಠಿಣ ಸಜೆ ಹಾಗೂ 11,75,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ತಿರುವನಂತಪುರ ನಿವಾಸಿಯಾದ ತಾಯಿ ಹಾಗೂ ಪಾಲಕ್ಕಾಡ್ ನಿವಾಸಿಯಾದ ಯುವಕನಿಗೆ ಮಂಜೇರಿ ಫಾಸ್ಟ್ ಟ್ರಾಕ್ ನ್ಯಾಯಾಲಯಈ ಶಿಕ್ಷೆ ವಿಧಿಸಿದೆ.
2019ರಿಂದ 2021ರ ವರೆಗೆ ಎರಡು ವರ್ಷ ಕಾಲ ಬಾಲಕಿಗೆ ಕಿರುಕುಳ ನೀಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ, ನಗ್ನತೆ ಪ್ರದರ್ಶನ, ಮದ್ಯನೀಡಿ ಬೆದರಿಕೆಯೊಡ್ಡಿದ ಆರೋಪದಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.







