ಪೆರ್ಲ: ಕಂದಲ್ ಜುಮಾ ಮಸೀದಿ ಸಮೀಪದ ನಿವಾಸಿ ಮುಹಮ್ಮದ್ ಕುಂಞಿ (75) ನಿಧನ ಹೊಂದಿದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿ ದ್ದರು. ಮುಂಬೈ ಹಾಗೂ ದುಬೈಯಲ್ಲಿ ಈ ಹಿಂದೆ ಉದ್ಯೋಗದಲ್ಲಿದ್ದ ಇವರು ಬಳಿಕ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದರು. ಇವರ ಪತ್ನಿ ನಬೀಸ ಏಳು ತಿಂಗಳ ಹಿಂದೆ ನಿಧನ ಹೊಂದಿ ದ್ದಾರೆ. ಮೃತರು ಮಕ್ಕಳಾದ ಅನ್ವರ್, ಬಶೀರ್, ಸುಬೈದ, ಹಾಜಿರ, ಅಳಿಯಂದಿರಾದ ಕಬೀರ್, ಖಲೀಲ್, ಸೊಸೆ ತೌಸೀರ, ಸಹೋದರರಾದ ಅಬ್ದುಲ್ ರಹ್ಮಾನ್, ಅಬ್ದುಲ್ ಖಾದರ್, ಸಹೋದರಿಯ ರಾದ ಐಸಾಬಿ, ನಬೀಸ, ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





