ಮುಹಿಮ್ಮಾತ್‌ನಿಂದ ಜನರಲ್ ಆಸ್ಪತ್ರೆಯ ರೋಗಿಗಳಿಗೆ ಕಾರುಣ್ಯಸ್ಪರ್ಶ

ಪುತ್ತಿಗೆ: ಕಾಸರಗೋಡು ಜನರಲ್ ಆಸ್ಪತ್ರೆಯ 300ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಅವರ ಪರಿಚಾರಕರಿಗೆ, ನೌಕರರಿಗೆ ಮುಹಿಮ್ಮಾತ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರ್‌ನಿಂದ ನಬಿದಿನದಂಗವಾಗಿ ಕಾರುಣ್ಯ ಸ್ಪರ್ಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಹಿಮ್ಮಾತ್ ಮದ್‌ಹುರಸೂಲ್ ಫೌಂಡೇಶನ್ ಅಧೀನದಲ್ಲಿ 10 ದಿನಗಳಿಂದ ನಡೆದು ಬರುತ್ತಿದ್ದ ಕಾರ್ಯಕ್ರಮದಂಗವಾಗಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಅಗತ್ಯದ ಉಪಕರಣಗಳು, ರೋಗಿಗಳಿಗೆ ಹಣ್ಣು ಹಂಪಲು ಕಿಟ್‌ಗಳನ್ನು ನೀಡಲಾಯಿತು.

ಕಳೆದ 10 ವರ್ಷಗಳಿಂದ ಮುಹಿಮ್ಮಾತ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಗತ್ಯದ ಸಾಮಗ್ರಿಗಳನ್ನು ನೀಡುತ್ತಿದೆ. ಕಾರ್ಯಕ್ರಮವನ್ನು ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಯವರ ಅಧ್ಯಕ್ಷತೆಯಲ್ಲಿ ಡಾ| ಜನಾರ್ಧನ ನಾಯ್ಕ್ ಉದ್ಘಾಟಿಸಿ ದರು. ಐಸಿಎಫ್ ಇಂಟರ್ ನ್ಯಾಶನಲ್ ಸೆಕ್ರೆಟರಿ ಹಮೀದ್ ಭಾಷಣ ಮಾಡಿದರು. ಮುಹಿ ಮ್ಮಾತ್ ಸೆಕ್ರೆಟರಿ ಮೂಸಾ ಸಖಾಫಿ ಕಳತ್ತೂರು ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ, ಸಿದ್ದಿಕ್ ಸಕಾಫಿ ಸಹಿತ ಹಲವರು ಭಾಗವಹಿಸಿದರು.

You cannot copy contents of this page