ಕುಂಬಳೆ: ಕುಂಬಳೆಯ ವ್ಯಾಪಾರಿ ಕುಂಟಂಗೇರಡ್ಕ ನಿವಾಸಿಯಾದ ಮಮ್ಮು ಹಾಜಿ ಸೀಮಾ (65) ನಿನ್ನೆ ಸಂಜೆ ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ ಇವರು ಚಿಕಿತ್ಸೆಯಲ್ಲಿದ್ದರು. ಕುಂಬಳೆಯ ಸೀಮಾ ಫುಟ್‌ವೇರ್ ಅಂಗಡಿಯ ಮಾಲಕನಾಗಿದ್ದ ಇವರು ಕುಂಬಳೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾರ್ಯಕಾರಿ ಸದಸ್ಯರಾಗಿದ್ದರು. ಕುಂಬಳೆ ಬದರ್ ಜುಮಾ ಮಸೀದಿ ಅಧ್ಯಕ್ಷ, ಜೊತೆ ಕಾರ್ಯದರ್ಶಿಯಾಗಿ ಕಾರ್ಯಾಚರಿಸಿದ್ದರು. ನಿಧನಕ್ಕೆ ಕುಂಬಳೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಘಟಕ ಪದಾಧಿಕಾರಿಗಳು, ಕುಂಬಲೆ ಬದರ್ ಜುಮಾ ಮಸೀದಿ ಪದಾಧಿಕಾರಿಗಳು, ತಾಹ ಮಸೀದಿ ಸಮಿತಿ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ ಸುಹರಾ, ಮಕ್ಕಳಾದ ಮುನೀರ್, ರಿಯಾಸ್, ಕಬೀರ್, ಸಬೀರ್, ರಹೀಸ್, ಮುನೈಸ್, ಸೊಸೆ ಮಿಸ್ರಿಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಪತ್ನಿ ಆಯಿಷಾ, ಪುತ್ರಿ ರುಕ್ಸನಾ ಈ ಹಿಂದೆ ನಿಧನ ಹೊಂದಿದ್ದಾರೆ.







