ಕಾಸರಗೋಡಿನಲ್ಲಿ ಭಾರೀ ಕೋಲಾಹಲವೆಬ್ಬಿಸಿದ ಪ್ರದೀಪ್ ಕುಮಾರ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ 36 ವರ್ಷಗಳ ಬಳಿಕ ಹೈದರಾಬಾದ್‌ನಿಂದ ಸೆರೆ

ಕಾಸರಗೋಡು: ಕಾಸರಗೋಡು ನಗರದಲ್ಲಿ ಭಾರೀ ಕೋಲಾಹಲವೆಬ್ಬಿಸಿದ ಪ್ರದೀಪ್ ಕುಮಾರ್ ಕೊಲೆ ಪ್ರಕರಣದ ಆರೋಪಿಯನ್ನು 36 ವರ್ಷಗಳ ಬಳಿಕ ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡು ತಳಂಗರೆಯ ಗಬ್ಬರ್ ಅಶ್ರಫ್ ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ. ನಿತಿನ್ ನೇತೃತ್ವದ ನಾರ್ಕೋಟಿಕ್ ಸ್ಕ್ವಾಡ್ ತಂಡದ ಎಸ್‌ಐ ನಾರಾಯಣನ್ ನಾಯರ್, ಗ್ರೇಡ್ ಎಸ್‌ಐ ಅಬೂಬ ಕ್ಕರ್ ಕಲ್ಲಾಯಿ, ಎಎಸ್‌ಐ ಶಾಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀ ಸರ್ ರಾಜೇಶ್ ಮಾಣಿಯಾಟ್ ಎಂಬ ವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ. ಬಂಧಿತನನ್ನು ಇಂದು ವೈದ್ಯ ಕೀಯ ತಪಾಸಣೆಗೊಳಪಡಿಸಿದ ಬಳಿಕ  ನ್ಯಾಯಾಲಯದಲ್ಲಿ ಹಾಜರುಪಡಿಸ ವುದಾಗಿ ಪೊಲೀಸರು ತಿಳಿಸಿದ್ದಾರೆ.

 1996 ಅಕ್ಟೋಬರ್ 5ರಂದು ರಾತ್ರಿ ಕಾಸರಗೋಡಿನ ಪ್ರದೀಪ್ ಕುಮಾರ್ ಎಂಬ ಯುವಕನನ್ನು   ಉಪಾಯದಿಂದ ಆಟೋ ರಿಕ್ಷಾದಲ್ಲಿ ತಳಂಗರೆಗೆ ಕರೆದೊಯ್ದು ತಳಂಗರೆ ರೈಲ್ವೇ ಸೇತುವೆ ಬಳಿ ಅವರ ತಲೆಗೆ ಹೊಡೆದು  ಬೀಳಿಸಿದ ಬಳಿಕ ಕತ್ತಿಯಿಂದ ಇರಿದು  ಕೊಲೆಗೈಯ್ಯಲಾಗಿದೆ. ಅದಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ನಾಲ್ವರು ಆರೋಪಿ ಗಳನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಆದರೆ  ನ್ಯಾಯಾಲಯದಲ್ಲಿ  ಈ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ ಈ ಪ್ರಕರಣದ ಆರೋಪಿ ಗಳಲ್ಲೋರ್ವನಾದ ಗಬ್ಬರ್ ಅಶ್ರಫ್ ಅಂದಿನಿಂದ ತಲೆಮರೆಸಿಕೊಂಡಿದ್ದನು. ಆತನ ಪತ್ತೆಗಾಗಿ ನ್ಯಾಯಾಲಯ  ಬಳಿಕ ವಾರಂಟ್ ಜ್ಯಾರಿಗೊಳಿಸಿತ್ತು. ಈ ಮಧ್ಯೆ ಹಳೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಕ್ಕೆ ರೂಪು ನೀಡಲಾಗಿತ್ತು. ಆ ತಂಡ ನಡೆಸಿದ ತನಿಖೆಯಲ್ಲಿ ಆರೋಪಿ ಗಬ್ಬರ್ ಅಶ್ರಫ್ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿ ರುವ ಬಗ್ಗೆ ಮಾಹಿತಿ ಲಭಿಸಿದೆ. ಅದ ರಂತೆ ಪೊಲೀಸರು ಅಲ್ಲಿಗೆ ಸಾಗಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ  ಹೈದರಾ ಬಾದ್‌ನ ಚಾರ್ಮಿನಾರ್ ಸಮೀಪದ ಗಲ್ಲಿಯಿಂದ ಆರೋಪಿಯನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಾಸರಗೋಡಿನಿಂದ ತಲೆಮರೆಸಿ ಕೊಂಡಿದ್ದ ಆರೋಪಿ ಚಾರ್ಮಿನಾರ್ ಬಳಿ  ಕುಟುಂಬ ಸಹಿತ ವಾಸಿಸುತ್ತಿದ್ದನು. ಆತನನ್ನು ಅಲ್ಲಿಂದ ನಿನ್ನೆ ಮಧ್ಯಾಹ್ನ  ಅಲ್ಲಿನ ಪೊಲೀಸರ ಸಹಾಯದೊಂದಿಗೆ ಬಂಧಿಸಿ ಕಾಸರಗೋಡಿಗೆ ತರಲಾಗಿದೆ.  ಈ ಆರೋಪಿಯ ಪತ್ತೆಗಾಗಿ ಪೊಲೀ ಸರು ಹಲವು ವರ್ಷಗಳಿಂದ ನಿರಂತರ ಶೋಧ ನಡೆಸಿದ್ದರೂ ಅದು ಸಫಲವಾಗಿ ರಲಿಲ್ಲ.

ಕೊನೆಗೂ ಕೊಲೆ ನಡೆದ 36 ವರ್ಷಗಳ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅದು ಕಾಸರಗೋಡು ಪೊಲೀಸರ ತನಿಖೆಯ ಗರಿಮೆಯನ್ನು ಹೆಚ್ಚಿಸುವಂತೆ ಮಾಡಿದೆ.

RELATED NEWS

You cannot copy contents of this page