ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರಣ: ತಲೆಮರೆಸಿಕೊಂಡ ಕುಂಜತ್ತೂರು ನಿವಾಸಿ ಸೆರೆ; ನಾಲ್ವರು ಆರೋಪಿಗಳು ಈಗಲೂ ಗಲ್ಫ್‌ನಲ್ಲಿ

ಮಂಜೇಶ್ವರ:  ಮನೆಯಲ್ಲಿ ಗಲಾಟೆ ಸೃಷ್ಟಿಸುತ್ತಿದ್ದಾನೆಂದು ನಾಗರಿಕರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಬಳಿಕ ಸಂಬಂಧಿಕನೊಂದಿಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರ ಣದಲ್ಲಿ ಇನ್ನೋರ್ವನನ್ನು ಬಂಧಿಸ ಲಾಗಿದೆ. ಕುಂಜತ್ತೂರು ನಿವಾಸಿಯಾದ ನೌಫಲ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ತನಿಖೆಗೊಳಪಡಿಸಲಾಗುತ್ತಿದೆ. ಮೀಂಜ ಮದಕ್ಕಳದ  ದಿ| ಅಬ್ದುಲ್ಲ ಎಂಬವರ ಪುತ್ರ ಮೊಯ್ದೀನ್ ಆರಿಫ್ (21) ಕೊಲೆಗೀಡಾದ ಪ್ರಕರಣದಲ್ಲಿ  ನೌಫಲ್ ನನ್ನು ಬಂಧಿಸಲಾಗಿದೆ. 8 ಮಂದಿ ಆರೋಪಿಗಳಿರುವ ಈ ಪ್ರಕರಣದಲ್ಲಿ ಮೂವರನ್ನು ಈ ಹಿಂದೆ ಬಂಧಿಸಲಾ ಗಿತ್ತು. ಈಗ ನೌಫಲ್ ಸೆರೆಯಾಗು ವುದ ರೊಂದಿಗೆ ಬಂಧಿತರಸಂಖ್ಯೆ ನಾಲ್ಕ ಕ್ಕೇರಿದೆ. ಇನ್ನೂ 4 ಮಂದಿ ಆರೋಪಿಗಳು ಗಲ್ಫ್‌ನಲ್ಲಿ ತಲೆಮರೆಸಿ ಕೊಂಡಿ ದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

2024 ಮಾರ್ಚ್ 4ರಂದು ಮೊಯ್ದೀನ್ ಆರೀಫ್ ಮನೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದರು. ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮನೆಗೆ ತಲುಪಿಸಿದ ಮೃತದೇಹವನ್ನು ಕಂಡ ನಾಗರಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆ ವೇಳೆ ಇದು ಕೊಲೆಕೃತ್ಯವಾಗಿದೆಯೆಂದು ತಿಳಿದುಬಂದಿತ್ತು. ಮೊಯ್ದೀನ್ ಆರಿಫ್ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದ ಹಿಂದಿನ ದಿನ ಇವರನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಗಾಂಜಾದ ಅಮಲಿನಲ್ಲಿ ಮನೆಯಲ್ಲಿ  ಬೊಬ್ಬೆ ಹಾಕುತ್ತಿದ್ದಾನೆಂದು ನಾಗರಿಕರು ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಅದೇ ದಿನ ರಾತ್ರಿ ಸಂಬಂಧಿಕನನ್ನು ಠಾಣೆಗೆ ಕರೆಸಿ ಆತನ ಜೊತೆ ಮೊಯ್ದೀನ್ ಆರಿಫ್‌ರನ್ನು ಮನೆಗೆ ಕಳುಹಿಸಿಕೊಟ್ಟಿದ್ದರ. ಇಬ್ಬರು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳಿದ್ದರು. ಅಂದು ರಾತ್ರಿ ಮೊಯ್ದೀನ್ ಆರಿಫ್‌ರನ್ನು ಮನೆಗೆ ತಲುಪಿಸಿದ ವೇಳೆ ದೇಹದಲ್ಲಿ ಗಾಯಗಳು ಕಂಡುಬಂದಿತ್ತು. ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿರುವುದಾಗಿ ಮೊದಲು ತಿಳಿಸಲಾಗಿತ್ತು. ಆದ್ದರಿಂದ ಯಾರೂ ಸಂಶಯ ವ್ಯಕ್ತಪಡಿಸಿರಲಿಲ್ಲ. ಅನಂತರ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಸಂಜೆ ವೇಳೆ ಮನೆಗೆ ತಲುಪಿಸಲಾಗಿತ್ತು. ಮೃತದೇಹದಲ್ಲಿ ಗಾಯ ಕಂಡುಬಂದ ಹಿನ್ನೆಲೆಯಲ್ಲಿ ನಾಗರಿಕರು ಸಂಶಯ ವ್ಯಕ್ತಪಡಿಸಿದ್ದರು. ಅನಂತರ ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿ ಸಲಾಗಿತ್ತು. ಬಳಿಕ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಮೃತದೇಹದಲ್ಲಿ ಗಾಯ ಗಳಿರುವುದನ್ನು ಖಚಿತಪಡಿಸಲಾಗಿತ್ತು.  ಅನಂತರ ಮೃತದೇಹವನ್ನು ಪರಿಯಾರಂಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದು,  ಅಲ್ಲಿಂದ ಲಭಿಸಿದ ವರದಿ ಪ್ರಕಾರ  ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

RELATED NEWS

You cannot copy contents of this page