ಕೊಚ್ಚಿ: ಹರಿಪ್ಪಾಡ್ ನಿವಾಸಿಯಾದ ಸಾವರಿಯ ಬಸಂತ್ (21) ಎಂಬಾಕೆಯನ್ನು ಉಸ್ಬೆಕಿಸ್ತಾನದಲ್ಲಿ ಲ್ಯಾಪ್‌ಟಾಪ್‌ನಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಪೆರಿಂದಲ್ ಮಣ್ಣ ನಿವಾಸಿ ಸದರುಲ್ ಅನಂಗೆ ಉಸ್ಬೆಕಿಸ್ತಾನ ನ್ಯಾಯಾಲಯ ೮ ವರ್ಷ ಹಾಗೂ ೭ ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾವರಿಯಳನ್ನು ಆರೋಪಿ ನಿರಂತರ ಮತಾಂತರಕ್ಕೆ ಒತ್ತಾಯಿಸುತ್ತಿದ್ದನು. ಅದಕ್ಕೆ ಆಕೆ ನಿರಾಕರಿಸಿರುವುದರಿಂದ ಗಂಟೆಗಳ ಕಾಲ ಕ್ರೂರವಾಗಿ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿಯ ಕುಟುಂಬ ಆರೋಪಿಸಿತ್ತು. ಉಸ್ಬೆಕಿಸ್ತಾನದಲ್ಲಿ ಇಂತಹ ಪ್ರಕರಣದ ಆರೋಪಿಗೆ ವಿಧಿಸುವ ಗರಿಷ್ಠ ಶಿಕ್ಷೆಯನ್ನು ಸದರುಲ್ ಅನಂಗೆ ವಿಧಿಸಲಾಗಿದೆ.
2026 ಜುಲೈಯಲ್ಲಿ ಉಸ್ಬೆಕಿಸ್ತಾನದಲ್ಲಿ ಸಾವರಿಯಳನ್ನು ಕೊಲೆಗೈಯ್ಯಲಾಗಿದೆ. ಮಲಪ್ಪುರಂನ ಪೆರಿಂದಲ್‌ಮಣ್ಣ ನಿವಾಸಿಯಾದ ಸದರುಲ್ ಅನಂ ವಿದ್ಯಾರ್ಥಿನಿಯ ಸಹಪಾಠಿಯೂ ಆಗಿದ್ದನು. ಈತನ ಒತ್ತಾಯಕ್ಕೆ ಮಣಿಯದ ಸಾವರಿಯಳನ್ನು ಸದರುಲ್ ಅನಂ ಲ್ಯಾಪ್‌ಟೋಪ್‌ನಿಂದ ತಲೆಗೆ ಹೊಡೆದು ಕೊಲೆಗೈದಿದ್ದಾನೆಂದು ದೂರಲಾಗಿದೆ. ತಲೆಗೆ ಉಂಟಾದ ಗಾಯ ಹಾಗೂ ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣವೆಂದು ಆಲಪ್ಪುಳಂ ವಂಡಾನಂ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಸಾವರಿಯ ಹಾಗೂ ಆರೋಪಿ ಸದರುಲ್ ಅನಂ ಉಸ್ಬೆಕಿಸ್ತಾನದ ಬುಕಾರ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದರು. 2025 ಡಿಸೆಂಬರ್‌ನಲ್ಲಿ ಸಾವರಿಯ ಉನ್ನತ ಶಿಕ್ಷಣಕ್ಕಾಗಿ ಉಸ್ಬೆಕಿಸ್ತಾನಕ್ಕೆ ತೆರಳಿದ್ದಳು. ಈಕೆಯ ಕೊಲೆ ಪ್ರಕರಣದ ಬಗ್ಗೆ ಕೇರಳದಲ್ಲಿ ಕ್ರೈಂಬ್ರಾಂಚ್ ಕೂಡಾ ತನಿಖೆ ನಡೆಸುತ್ತಿದೆ.







