ಕಾಸರಗೋಡು: ಮುಸ್ಲಿಂ ಲೀಗ್‌ನ ಭದ್ರ ಕೋಟೆಯೆಂದು ಹೇಳಲಾಗುತ್ತಿರುವ ಕಾಸರಗೋಡು ನಗರಸಭೆಯ ಆಡಳಿತವನ್ನು ಮುಸ್ಲಿಂ ಲೀಗ್ ತನ್ನ ಕೈಯಲ್ಲೇ ಉಳಿಸಿಕೊಂಡಿದೆ.
ಒಟ್ಟು 30 ಸೀಟುಗಳ ಪೈಕಿ 24 ವಾರ್ಡ್‌ಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇದರಲ್ಲಿ 23 ವಾರ್ಡ್‌ಗಳು ಕೂಡಾ ಲೀಗ್‌ನದ್ದಾಗಿದೆ. ಎನ್‌ಡಿಎಗೆ 14 ಸೀಟು ಲಭಿಸಿದೆ. ಬಿಜೆಪಿಗೆ 2 ಸೀಟು ನಷ್ಟಗೊಂಡಿದೆ. ಇದೇ ವೇಳೆ ಎಲ್‌ಡಿಎಫ್ 1 ಸೀಟಿನಿಂದ 2 ಸೀಟು ಆಗಿ ಬಲ ಹೆಚ್ಚಿಸಿಕೊಂಡಿದೆ. ಎಲ್‌ಡಿಎಫ್‌ನ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಗರಸಭೆ ರೂಪೀಕರಿಸಿದ ಬಳಿಕ ಎರಡು ಬಾರಿ ಮಾತ್ರವೇ ಯುಡಿಎಫ್‌ಗೆ ಆಡಳಿತ ನಷ್ಟಗೊಂಡಿತ್ತು. ಆ ಎರಡು ಬಾರಿ ಎಡರಂಗ ಆಡಳಿತ ನಡೆಸಿತ್ತು. ಆ ವೇಳೆ ನಗರಸಭೆಯಲ್ಲಿ ಅತೀ ದೊಡ್ಡ ಎರಡನೇ ಪಕ್ಷ ಬಿಜೆಪಿಯಾಗಿತ್ತು.







