ರಾಷ್ಟ್ರೀಯ ಹೆದ್ದಾರಿ : ಕುಂಬಳೆಯಲ್ಲಿ ಟೋಲ್ ಸಂಗ್ರಹರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆ-ಹೈಕೋರ್ಟ್ 

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕುಂಬಳೆ ಆರಿಕ್ಕಾಡಿಯಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆಂದು ಹೈಕೋರ್ಟ್ ಪ್ರಶ್ನಿಸಿದೆ. ಕ್ರಿಯಾ ಸಮಿತಿ ಕನ್ವೀನರ್ ಅಶ್ರಫ್ ಕಾರ್ಳೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಪ್ರಶ್ನೆಯನ್ನು ಮುಂದಿರಿಸಿದೆ. ಇದೇ ವೇಳೆ  ಆಯೋಗವನ್ನು ನೇಮಿಸಬೇಕೆಂಬ ಅರ್ಜಿಯನ್ನು ಕ್ರಿಯಾಸಮಿತಿ ಮುಂದಿರಿಸಿದ್ದು ಅದನ್ನು ರಾಷ್ಟ್ರೀಯ ಹೆದ್ದಾರಿ ಅಥೋರಿಟಿಗಾಗಿ ಹಾಜರಾದ ನ್ಯಾಯವಾದಿ ವಿರೋಧಿಸಿದ್ದಾರೆ. ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ಅಧ್ಯಕ್ಷರಾಗಿರುವ ಏಕ ಸದಸ್ಯ ಪೀಠ ಈ ಪ್ರಕರಣವನ್ನು ಪರಿಗಣಿಸುತ್ತಿದೆ. ಅರ್ಜಿಯ ಮೇಲೆ ಸಮಗ್ರ ವಾದ ಆಲಿಸುವಿಕೆಯನ್ನು ಈ ತಿಂಗಳ 28ಕ್ಕೆ ನ್ಯಾಯಾಲಯ ಮುಂದೂಡಿದೆ. ಸರ್ವೀಸ್ ರಸ್ತೆಗಳ ಸಹಿತ ಮೂಲಭೂತ ಸೌಕರ್ಯಗಳು ಅಪೂರ್ಣಗೊಂಡಿದ್ದು, ಇದರಿಂದ ಪ್ರಯಾಣ ಸಮಸ್ಯೆಯನ್ನು ನೇರವಾಗಿ ತಿಳಿಯಲು ಆಯೋಗವನ್ನು ನೇಮಿಸಬೇಕೆಂದು ಕ್ರಿಯಾ ಸಮಿತಿ ಪರವಾಗಿ ಹಾಜರಾದ ನ್ಯಾಯವಾದಿ ಸಜನ್ ಇಬ್ರಾಹಿಂ ನ್ಯಾಯಾಲಯ ದೊಂದಿಗೆ ಆಗ್ರಹಪಟ್ಟಿದ್ದಾರೆ. ಪ್ರಸ್ತುತ ವುಳ್ಳ ನಿರ್ಮಾಣ ಲೋಪಗಳನ್ನು ಪರಿಹರಿಸದೆ ಟೋಲ್ ಸಂಗ್ರಹಿಸು ವುದು ಜನರೊಂ ದಿಗೆ ತೋರಿಸುವ ಸವಾಲಾಗಿದೆಯೆಂದೂ ಕ್ರಿಯಾ ಸಮಿತಿ ಆರೋಪಿಸಿದೆ.

RELATED NEWS

You cannot copy contents of this page