ಕುಂಬಳೆ: ಭಾಸ್ಕರನಗರದಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಆರಂಭಿಸಿದ ನವೋದಯ ಗ್ರಂಥಾಲಯ ಹಾಗೂ ವಾಚನಾಲಯದ ಉದ್ಘಾಟನೆಯನ್ನು ನಿನ್ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟನೆ ನಿರ್ವಹಿಸಿ ಶುಭಾಶಂಸನೆಗೈದರು. ನಿವೃತ್ತ ಎಎಸ್‌ಪಿ ಟಿ.ಪಿ. ರಂಜಿತ್ ಧ್ವಜಾರೋಹಣ ನಡೆಸಿದರು. ನಿವೃತ್ತ ಅಡಿಶನಲ್ ಎಸ್.ಐ. ಬಾಬು, ನಿವೃತ್ತ ಎಎಸ್‌ಐ ಗೋಪಾಲಕೃಷ್ಣ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸದಸ್ಯೆ ಶೋಭಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ ಧಿಗಳು ಹಾಗೂ ನಾಗರಿಕರು ಭಾಗವಹಿಸಿದರು.
