ನವರಾತ್ರಿ ಮಹೋತ್ಸವ ಕ್ಷೇತ್ರಗಳಲ್ಲಿ ಭಕ್ತರ ಸಂದಣಿ

ಕಾಸರಗೋಡು: ನವರಾತ್ರಿ ಮಹೋತ್ಸವದಂಗವಾಗಿ ನಾಡಿನಾದ್ಯಂತ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರಗುತ್ತಿವೆ. ಸೆ. 22ರಿಂದ ಆರಂಭಗೊಂಡ ನವರಾತ್ರಿ ಮಹೋತ್ಸವ ಅಕ್ಟೋಬರ್ 2ರವರೆಗೆ ಜರಗಲಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಾಳೆ ಮಹಾನವಮಿ, ಚಂಡಿಕಾಹೋಮ, ವಾಹನಪೂಜೆ, 2ರಂದು ವಿಜಯದಶಮಿ, ವಿದ್ಯಾರಂಭ, ಶಮಿಪೂಜೆ ನಡೆಯಲಿರುವುದು. ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇಂದು ಸಂಜೆ 7ರಿಂದ ಧನ್ಯಾಮುರಳಿ ಆಸ್ರ ಉಳಿಯ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9ರಿಂದ ವೆಂಕಟರಮಣ ಬಾಲಗೋಕುಲ ಹಾಗೂ ವೆಂಕಟರಮಣ ಮಾತೃಸಮಿತಿಯಿಂದ ವಿವಿಧ ಮನರಂಜನಾ ಕಾರ್ಯಕ್ರಮ, ನಾಳೆ ಆಯುಧ ಪೂಜೆ, ಸಂಜೆ 6.30ಕ್ಕೆ ವಿಶ್ವರೂಪ ದರ್ಶನ, 7ರಿಂದ ಸಿಂಧೂ ಭಾಸ್ಕರನ್ರ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 9ಕ್ಕೆ ಮಹಾಪೂಜೆ, 9.30ಕ್ಕೆ ಶ್ರೀ ದೇವರ ಉತ್ಸವ ಬಲಿ, ಅಶ್ವತ್ಥಕಟ್ಟೆಗೆ ಘೋಷಯಾತ್ರೆ, ಕಟ್ಟೆಪೂಜೆ, 2ರಂದು ಬೆಳಿಗ್ಗೆ ಕದಿರು (ತೆನೆ) ತುಂಬಿಸುವುದು, ಮಧ್ಯಾಹ್ನ ನವಾನ್ನ, ಸಂಜೆ 5ರಿಂದ ಸಂಗೀತ ಸೇವೆ, ರಾತ್ರಿ 9.30ಕ್ಕೆ ಶ್ರೀ ದೇವರ ಘೋಷಯಾತ್ರೆ, 11.30ಕ್ಕೆ ಕಟ್ಟೆಪೂಜೆ, 12 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಹಾಪೂಜೆ ನಡೆಯಲಿದೆ.

You cannot copy contents of this page