ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು, ದುರ್ಗಾಪರಮೇಶ್ವರಿ, ಶಾಸ್ತಾರ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಿರುವ ನೂತನ ಧ್ವಜಸ್ತಂಭದ ಶೋಭಾಯಾತ್ರೆ ನಿನ್ನೆ ನಡೆಯಿತು. ಬೆಳಿಗ್ಗೆ ಪಿಲಾಂಕಟ್ಟೆ ಬಳಿಯ ಕೋಳಾರಿಯಿಂದ ಮಾವಿನಕಟ್ಟೆ ನಾರಂಪಾಡಿ ಮೂಲಕ ಕ್ಷೇತ್ರಕ್ಕೆ ಧ್ವಜಸ್ತಂಭದ ಮರವನ್ನು ಶೋಭಾಯಾತ್ರೆ ಮೂಲಕ ತರಲಾಯಿತು. ಸಂಜೆ ವೇಳೆಗೆ ಶೋಭಾಯಾತ್ರೆ ಕ್ಷೇತ್ರಕ್ಕೆ ತಲುಪಿದೆ. ಹಲವಾರು ಮಂದಿ ಭಾಗವಹಿಸಿದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯುವ ನಿರೀಕ್ಷೆ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧ್ವಜಸ್ತಂಭದ ಪ್ರತಿಷ್ಠೆ ನಡೆಯಲಿದೆ.






