ಕಾಸರಗೋಡು: ಕೇರಳದಲ್ಲಿ ಎಡ-ಬಲ ಒಕ್ಕೂಟಗಳು ಮತ ಬ್ಯಾಂಕ್ ಉದ್ದೇಶ ಇರಿಸಿ ಯೋಜನೆಗಳನ್ನು ಜ್ಯಾರಿ ಗೊಳಿಸುವಾಗ ಯಾವುದೇ ತಾರತಮ್ಯ ವಿಲ್ಲದ ಆಡಳಿತವನ್ನು ನರೇಂದ್ರ ಮೋದಿ ಸರಕಾರ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಜಿಲ್ಲಾ ಪಂಚಾಯತ್ ಸಿವಿಲ್ ಸ್ಟೇಷನ್ ವಾರ್ಡ್‌ಗಳ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿವಿಲ್ ಸ್ಟೇಷನ್ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ ಪ್ರತಿನಿಧಿ ಹಲವು ಕಾಲಗಳಿಂದ ಗೆದ್ದುಬರುತ್ತಿದ್ದು ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಸಮಯದಲ್ಲಿ ಇಲ್ಲಿನ ಜನರು ಒಡ್ಡಿದ ಬೇಡಿಕೆಗಳು ಈಗಲೂ ಕೂಡಾ ಪರಿಹರಿಸಲ್ಪಡದೆ ಮುಂದುವರಿಯುತ್ತಿರು ವುದಾಗಿ ಅವರು ದೂರಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದರು. ಡಿವಿಶನ್‌ನ ಬಿಜೆಪಿ ಅಭ್ಯರ್ಥಿ ಪಿ.ಆರ್. ಸುನಿಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರನ್ ಕುದ್ರೆಪ್ಪಾಡಿ, ಮಧೂರು ಪಂ. ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮಧೂರು ಪಂಚಾಯತ್ ಈಸ್ಟ್ ಏರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಧನಂಜಯನ್ ಮಧೂರು ಮಾತನಾಡಿದರು.







