ಮುಂದಿನ ರಾಜ್ಯೋದಯ ದಿನದಂದು ಕೇರಳ ಕಡು ಬಡವರಿಲ್ಲದ ಮೊದಲ ರಾಜ್ಯವಾಗಲಿದೆ- ಸಚಿವ ಕೆ. ರಾಜನ್

ಕಾಸರಗೋಡು: ಮುಂದಿನ ಕೇರಳ ರಾಜ್ಯೋದಯ ದಿನದಂದು ಕಡು ಬಡವರಿಲ್ಲದ ಮೊದಲ ರಾಜ್ಯವಾಗಿ ಕೇರಳ ಬದಲಾಗಲಿದೆ ಎಂದು ಸಚಿವ ಕೆ. ರಾಜನ್ ನುಡಿದರು. ಕಾಸರಗೋಡು ರೆವೆನ್ಯೂ ಡಿವಿಷನಲ್ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಮಟ್ಟದ ಪಟ್ಟೆ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾನೂನುಗಳು, ಕಾಯ್ದೆಗಳು ಜನಸಾಮಾನ್ಯರಿಗೆ ಸಹಾಯಕವಾಗುವ ರೀತಿಯಲ್ಲಿ ನೌಕರರು ವ್ಯವಸ್ಥಿತಗೊಳಿಸಬೇಕೆಂದು, ಕಾನೂನುಗಳ ಸಿಕ್ಕುಗಳನ್ನು ತೋರಿಸಿ ಜನರನ್ನು ಸಂಕಷ್ಟಭರಿತರಾಗಿ ಮಾಡಬಾರದೆಂದು ನೌಕರರಿಗೆ ಸಚಿವರು ನಿರ್ದೇಶ ನೀಡಿದರು. ರಾಜ್ಯದ ಒಕ್ಕಲಿಗರ ದೂರುಗಳು ಹಾಗೂ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹಾರಗೊಳಿಸಿದ ರಾಜ್ಯವಾಗಿ ಕೇರಳ ಬದಲಾಗುವುದಾಗಿ ಸಚಿವರು ನುಡಿದರು.

‘ಯೂನಿಕ್ ತಂಡ ಪೇರ್’ ವ್ಯವಸ್ಥೆ ಜ್ಯಾರಿಗೊಳಿಸಿರುವುದರೊಂದಿಗೆ ಆಸ್ತಿ ಖರೀದಿಸುವ ಮಾಲಕನ ಆಧಾರ ಹಾಗೂ ತಂಡಪೇರ್ ಲಿಂಕ್ ಮಾಡಲಾಗುತ್ತಿದೆ. ಇದರೊಂದಿಗೆ 15 ಎಕರೆಗಿಂತ ಹೆಚ್ಚು ಭೂಮಿ ಕೈವಶವಿರುವವರನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗುವುದಾಗಿ ಸಚಿವರು ನುಡಿದರು. ಪಟ್ಟೆ ಮೇಳದಲ್ಲಿ 1503 ಹಕ್ಕು ಪತ್ರಗಳಲ್ಲಿ 154 ಹಕ್ಕು ಪತ್ರಗಳು 1970ರಿಂದ ಸಮಸ್ಯೆಗೀಡಾಗಿದ್ದ ಕೊರಗ ವಿಭಾಗ ಜನರದ್ದಾಗಿದೆ ಎಂಬುದು ಸಂತೋಷಕರವಾದ ವಿಷಯವೆಂದು ಸಚಿವರು ನುಡಿದರು. ಹಕ್ಕುಪತ್ರ ವಿತರಣೆ ಸಮಯಾನುಸಾರ ಪೂರ್ತಿಗೊಳಿಸಿದ ಜಿಲ್ಲಾಧಿಕಾರಿ ಹಾಗೂ ನೌಕರರನ್ನು ಸಚಿವರು ಅಭಿನಂದಿಸಿದರು.

ಜಿಲ್ಲೆಯ 85 ವಿಲ್ಲೇಜ್‌ಗಳಲ್ಲಿ ೪೭ ವಿಲ್ಲೇಜ್‌ಗಳು ಈಗಾಗಲೇ ಸ್ಮಾರ್ಟ್ ಆಗಿವೆ. ಮೊದಲ ಹಂತದಲ್ಲಿ 17 ಹಾಗೂ ದ್ವಿತೀಯ ಹಂತದಲ್ಲಿ 18, ತೃತೀಯ ಹಂತದಲ್ಲಿ 13 ವಿಲ್ಲೇಜ್‌ಗಳು ಸ್ಮಾರ್ಟ್ ಆಗಿವೆ. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಇ. ಚಂದ್ರಶೇಖರನ್, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ, ವಿಮಲ ಶ್ರೀಧರನ್, ಟಿ.ಎಂ.ಎ. ಖರೀಂ, ಸಿ.ಪಿ. ಬಾಬು, ಖಾದರ್ ಬದರಿಯ, ಸಜಿ ಸೆಬಾಸ್ಟಿಯನ್ ಮಾತನಾಡಿದರು.

RELATED NEWS

You cannot copy contents of this page