ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ದ್ವಿತೀಯ ಹಂತದ ಮತದಾನ ಇಂದು ನಡೆಯುತ್ತಿರುವಂತೆ ಕೆಲವು ಕಡೆಗಳಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ. ಕಣ್ಣೂರು ಜಿಲ್ಲೆಯ ಆಂತೂರು ನಗರಸಭೆಯ ಐದು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಮಲಪ್ಪುರಂ ಜಿಲ್ಲೆಯ ಮುತ್ತೇಡಂ ಪಂಚಾಯತ್‌ನ ಪಾಯಿಂಬಾಡ 7ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಮತದಾನ ಇಂದು ನಡೆಯುತ್ತಿಲ್ಲ.
ಕಾಸರಗೋಡು ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ಗಳ ಒಂದೊಂದು ವಾರ್ಡ್‌ನಲ್ಲಿ ಇಂದು ಮತದಾನ ನಡೆಯುತ್ತಿಲ್ಲ. ಕಣ್ಣೂರು ಜಿಲ್ಲೆಯಲ್ಲಿ ಒಟ್ಟು 9 ಕಡೆಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಮುತ್ತೇಡಂ ಪಂಚಾಯತ್‌ನ ಪಾಯಿಂಬಾಡ 7ನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಹಸೀನ ಮೃತಪಟ್ಟ ಹಿನ್ನೆಲೆಯಲ್ಲಿ ಮತದಾನವನ್ನು ಮುಂದೂಡಲಾಗಿದೆ. ಮಂಗಲ್ಪಾಡಿ, ಮಡಿಕೈ ಪಂಚಾಯತ್‌ಗಳ ಒಂದೊಂದು ವಾರ್ಡ್‌ಗಳಲ್ಲಿ ಹಾಗೂ ಕಣ್ಣೂರು ಜಿಲ್ಲೆಯ ಕಣ್ಣಾಪುರಂ ಗ್ರಾಮ ಪಂಚಾಯತ್‌ನ ಆರು ವಾರ್ಡ್‌ಗಳಲ್ಲಿ, ಮಲಪ್ಪಡಂ ಪಂಚಾಯತ್‌ನ ೩ ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಇಲ್ಲಿ ಮತದಾನ ನಡೆಯುತ್ತಿಲ್ಲ. ಆದರೆ ಅದೇ ಪೋಲಿಂಗ್ ಬೂತ್‌ನಲ್ಲಿ ಬ್ಲೋಕ್, ಜಿಲ್ಲಾ ಪಂಚಾಯತ್‌ಗಿರುವ ಮತದಾನ ನಡೆಯುತ್ತಿದೆ.







