ಕಾಸರಗೋಡು: ಕುಖ್ಯಾತ ಕಳವು ಆರೋಪಿಯನ್ನು ಗುತ್ತಿಗೆದಾರನ ಮನೆ ಕಳವು ಯತ್ನ ವೇಳೆ ಸೆರೆ ಹಿಡಿಯ ಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಖಾಯಂ ವಾಸಿಸುವ ಮೂವಾಟುಪುಳ ನಿವಾಸಿ ನೌಫಲ್ ಎಂಬಾತನನ್ನು ಇಂದು ಮುಂಜಾನೆ ನರಿಮಾಳದಲ್ಲಿ ಸೆರೆಹಿಡಿಯಲಾಗಿದೆ. ನೀಲೇಶ್ವರ ಚಾಯೋಂನ ನರಿಮಾಳ ಎಂಬಲ್ಲಿನ ಗುತ್ತಿಗೆದಾರ ಸುರೇಶ್ ಪೆರಿಂಗುಳ ಎಂಬವರ ಮನೆಯಲ್ಲಿ ಕಳವಿಗೆತ್ನಿಸಿದ ವೇಳೆ ಈತನನ್ನು ಬಂಧಿಸಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಶಬ್ದ ಕೇಳಿ ಮನೆಯವರು ಎಚ್ಚೆತ್ತಾಗ ವ್ಯಕ್ತಿಯೋರ್ವ ಕಳವಿಗೆತ್ನಿಸಿ ಕಳ್ಳ ಪರಾರಿ ಯಾಗಿರುವುದು ಕಂಡು ಬಂದಿದೆ. ಮನೆಯ ಹಿಂಬದಿಯ ಬಾಗಿಲಿನ ಬೋಲ್ಟ್‌ಗಳನ್ನು ಕಳಚಿರುವುದು ಪತ್ತೆಯಾಗಿದೆ.
