ಕಾಸರಗೋಡು: ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ಬರೆದಿಟ್ಟ ಪತ್ರವೊಂ ದನ್ನು ಬೇಡಗಂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ‘ನನ್ನ ಸಾವಿಗೆ ಬೇರೆ ಯಾರೂ ಹೊಣೆಗಾರರಲ್ಲ’ ಎಂದು ಪತ್ರದಲ್ಲಿ ಬರೆದಿಟ್ಟಿರು ವುದಾಗಿ ಹೇಳಲಾಗುತ್ತಿದೆ. ಕುಟ್ಟಿಕ್ಕೋಲ್ ಬೇತೂರುಪಾರದ ದಿ| ಬಾಬು ಎಂಬವರ ಪುತ್ರಿ ಮಹಿಮಾ (20) ಬುಧವಾರ ಬೆಳಿಗ್ಗೆ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು ಕಾರಿನಲ್ಲಿ ಚೆರ್ಕಳದ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಈ ಮಧ್ಯೆ ಪಡಿಮರುದು ಎಂಬಲ್ಲಿಗೆ ತಲುಪಿದಾಗ ಕಾರು ಮಗುಚಿ ಬಿದ್ದಿತ್ತು. ಕೂಡಲೇ ಬೇರೊಂದು ವಾಹನದಲ್ಲಿ ಮಹಿಮಾಳನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಿಲ್ಲ. ಅಪಘಾತದಲ್ಲಿ ತಾಯಿ ವನಜ ಹಾಗೂ ಸಹೋದರ ಮಹೇಶ್ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಮಹಿಮಾ ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರಲ್ಲಿ ದ್ವಿತೀಯ ವರ್ಷ ನರ್ಸಿಂಗ್ ವಿದ್ಯಾರ್ಥಿನಿ ಯಾಗಿದ್ದಳು. ಈಕೆಗೆ ಯಾವುದೇ ಸಮಸ್ಯೆ ಇರಲಿಲ್ಲವೆಂದು ಹೇಳಲಾಗುತ್ತಿದೆ. ಆದ್ದರಿಂದ ಈಕೆ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತನಿಖೆ ನಡೆಸುತ್ತಿರು ವಾಗ ಪತ್ರ ಲಭಿಸಿದೆ.







