ಕುಂಬಳೆಯಲ್ಲಿ ಪಿ. ಮುರಳೀಧರನ್ ಹುತಾತ್ಮ ದಿನಾಚರಣೆ

ಕುಂಬಳೆ: ರಾಜಕೀಯ ವಿರೋಧಿಗಳಿಂದ ಕೊಲೆಗೀಡಾದ ಪಿ. ಮುರಳೀಧರನ್‌ರ ಹುತಾತ್ಮ ದಿನಾಚರಣೆಯಂಗವಾಗಿ ಕುಂಬಳೆ ಶಾಂತಿಪಳ್ಳ ಪೆಟ್ರೋಲ್ ಬಂಕ್ ಬಳಿ ಯುವಜನ ರ‍್ಯಾಲಿ, ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಡಿವೈಎಫ್‌ಐ ರಾಜ್ಯ ಜೊತೆ ಕಾರ್ಯದರ್ಶಿ ಕೆ. ಅನುಶ್ರೀ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ವಿ. ರತೀಶ್, ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಉಪಾಧ್ಯಕ್ಷ ನಿಸಾರುದ್ದೀನ್ ಮಲಂಗರ, ಬ್ಲೋಕ್ ಕೋಶಾಧಿಕಾರಿ ಮನೀಷ ಎಂ., ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಮಾತನಾಡಿದರು. ಬ್ಲೋಕ್ ಕಾರ್ಯದರ್ಶಿ ವಿಶ್ವರಾಜ್ ಪೆರ್ಲ ಸ್ವಾಗತಿಸಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿ.ಎಚ್. ಕುಞಂಬು ಹುತಾತ್ಮ ಮಂಟಪದಲ್ಲಿ ಸಂಸ್ಮರಣೆ ನಡೆಸಿದರು.

You cannot copy contents of this page