ಕುಂಬಳೆ: ಕುಂಬಳೆಯಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಕ್ವಾಡ್ ನಿನ್ನೆ ಸಂಜೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 146.88 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಮಂಜೇಶ್ವರ ಕುಂಜತ್ತೂರು ನಿಶಾಂತ್ ನಿವಾಸದ ಪ್ರಶಾಂತ್ ಬಿ. ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಕುಂಬಳೆ ರೇಂಜ್ ಅಬಕಾರಿ ಕಚೇರಿಗೆ ಹಸ್ತಾಂತರಿಸಲಾಗಿದೆ. ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದಲ್ಲಿ ಅಬಕಾರಿ ಇಲಾಖೆಯ ಇತರ ಸಿಬ್ಬಂದಿಗಳಾದ ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥನ್, ಅತುಲ್ ಟಿ.ವಿ. ಮತ್ತು ಇಂಟೆಲಿಜೆನ್ಸ್ ಬ್ಯೂರೋ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.







