ಅಧಿಕಾರಿಗಳ ನಿರ್ಲಕ್ಷ್ಯ: ಮಂಗಲ್ಪಾಡಿ ಪಂ.ಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿದ ಜನರೇಟರ್ ತುಕ್ಕು ಹಿಡಿದು ನಾಶ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ಗೆ ಬೆಳಕು ನೀಡಲು ಖರೀದಿಸಿದ ಜನರೇಟರ್ ಈಗ ತುಕ್ಕು ಹಿಡಿದು ನಾಶವಾಗುತ್ತಿದೆ. 2022ರಲ್ಲಿ 4.98 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್‌ಗೆ ಜನರೇಟರ್ ಖರೀದಿಸಲಾಗಿದೆ. ವಿದ್ಯುತ್ ಮೊಟಕುಗೊಂಡಾಗ ಉಪಯೋಗಿಸಲೆಂದು ಖರೀದಿಸಿದ ಜನರೇಟರ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿ  ತುಕ್ಕು ಹಿಡಿದು ನಾಶವಾಗುತ್ತಿದೆ. ಖರೀದಿಸಿದ ಬಳಿಕ ಬಿಸಿಲು,  ಮಳೆಗೆ ಅದನ್ನು ಇರಿಸಲಾಗಿದ್ದು, ಇದುವರೆಗೂ ಉಪಯೋಗಿಸಲಾಗಿಲ್ಲ.

ಜನರೇಟರ್‌ನ ಉಪಯೋಗಕ್ಕಾಗಿ ಮಾಡಬೇಕಾದ ವಯರಿಂಗ್ ನಡೆಸದಿರುವುದೇ 4.98 ಲಕ್ಷ ರೂ. ಈ ರೀತಿ ತುಕ್ಕು ಹಿಡಿಯಲು ಕಾರಣವೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎನ್‌ಸಿಪಿ ಮಂಜೇಶ್ವರ ಬ್ಲೋಕ್ ಸಮಿತಿ ಅಧ್ಯಕ್ಷ ಮಹಮೂದ್ ಕೈಕಂಬ, ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ವಿಜಯ ಕುಮಾರ್ ರೈ ಈ ಮೊದಲು ಪಂಚಾಯತ್‌ನ ಉನ್ನತ ಅಧಿಕಾರಿಗಳಿಗೆ, ವಿಜಿಲೆನ್ಸ್ ಸಹಿತ  ಇತರ ಅಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದರು. ಆದರೆ ಪಂಚಾಯತ್ ಪರಿಸರದಲ್ಲಿ ಅಲುಗಾಡದೇ ಕುಳಿತಿರುವ ಈ ಜನರೇಟರ್ ನಾಶವಾಗುತ್ತಿದೆ.

RELATED NEWS

You cannot copy contents of this page