ಕಟ್ಟೆಬಜಾರ್‌ನಲ್ಲಿ ಹಳೆ ಮನೆ ಕುಸಿದು ನಾಶ ನಷ್ಟ

ಮಂಜೇಶ್ವರ: ಜೋರಾಗಿ ಸುರಿದ ಮಳೆ, ಗಾಳಿಗೆ ಹಳೆಯ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ. ಮಂಜೇಶ್ವರ ಪಂಚಾಯತ್‌ನ ಕಟ್ಟೆಬಜಾರ್ ನಿವಾಸಿ ಜಗದೀಶ ಎಂಬವರ ಮನೆ ಕುಸಿದು ಬಿದ್ದಿದೆ. ಮಣ್ಣಿನ ಗೋಡೆ ಹೊಂದಿರುವ ಹೆಂಚು ಹಾಸಿದ ಈ ಮನೆಗೆ ನೂರಕ್ಕೂ ಮಿಕ್ಕು ವರ್ಷಗಳು ಕಳೆದಿರುವುದಾಗಿ ಹೇಳಲಾಗುತ್ತಿದೆ.
ಈ ಮನೆಯಲ್ಲಿ ಜಗದೀಶರವರ ಭಾವ ಮಾತ್ರವೇ ಇದ್ದು, ಇತರರು ಪಕ್ಕದಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದರು. ಮನೆ ಕುಸಿತದಿಂದ ವಿವಿಧ ವಸ್ತುಗಳು ನಾಶಗೊಂಡಿದ್ದು, ವ್ಯಾಪಕ ನಷ್ಟ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಕುಟುಂಬ ಈಗ ಪರಿಸರದ ಸಂಬAಧಿಕರ ಮನೆಯಲ್ಲಿ ವಾಸವಾಗಿದೆ.

RELATED NEWS

You cannot copy contents of this page