ಓಂಬ್ರದರ್ಸ್ ಕುಂಬಳೆಯಿಂದ ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಶೌಚಾಲಯ ಕೊಡುಗೆ

ಕುಂಬಳೆ : ಕುಂಬಳೆಯಲ್ಲಿ ಕಳೆದ ೨೬ ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಓಂ ಬ್ರದರ್ಸ್ ಕುಂಬಳೆ ಸಂಸ್ಥೆಯ ವತಿಯಿಂದ ಶ್ರೀ ಭಜನಾ ಮಂದಿರಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ೨ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಶೌಚಾಲಯವನ್ನು ಉದ್ಘಾಟಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂತ್ರಿವರ್ಯ ಶ್ರೀ ಯೋಗೀಶ್ ಕಡಮಣ್ಣಾಯ, ಓಂ ಬ್ರದರ್ಸ್ನ ಅಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ್, ಧಾರ್ಮಿಕ ಮುಂದಾಳು ಶಂಕರ ಆಳ್ವ ಕೋಟೆಕಾರ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಕೆ.ರಮೇಶ್ ಭಟ್,ಮಂದಿರದ ಅಧ್ಯಕ್ಷ ವರುಣ್ ಕುಮಾರ್, ಮಂದಿರದ ಮಹಿಳಾ ಸಮಿತಿ ಅಧ್ಯಕ್ಷೆ ಗುಲಾಬಿ, ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

You cannot copy contents of this page