ಕಾಸರಗೋಡು: ಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭಗೊಂಡಿದೆ. ಗುರುಪೂಜೆ, ಪ್ರಾರ್ಥನೆ, ಸಂಸ್ಮರಣೆ, ಪಾಯಸ ವಿತರಣೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಸೆ. 7ರಂದು ನಾರಾಯಣಗುರು ಜಯಂತಿ ಆಚರಿಸಲಾಗುವುದು. ಗುರುಮಂದಿರಗಳು, ಗುರುಗಳು ಸ್ಥಾಪಿಸಿದ ಕ್ಷೇತ್ರಗಳು, ಗುರುವಿಗೆ ಸಂಬಂ ಧಪಟ್ಟ ಸ್ಥಳಗಳಲ್ಲಿ ಕಾರ್ಯಕ್ರಮಗಳಿ ರುವುದು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಮಂದಿರದ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ನೀಡು ವರು. 7ರಂದು ಮುಂಜಾನೆ 5.30ಕ್ಕೆ ಬಾಗಿಲು ತೆರೆಯುವುದು, 6.30ಕ್ಕೆ ಗುರು ಅರ್ಚನೆ, 7 ಗಂಟೆಗೆ ಉಷಪೂಜೆ, ಮಧ್ಯಾಹ್ನ 12 ಗಂಟೆಗೆ ಗುರುಪೂಜೆ, 12.30ಕ್ಕೆ ಮಧ್ಯಾಹ್ನ ಪೂಜೆ, ಪ್ರಸಾದ, ಪಾಯಸ ವಿತರಣೆ ನಡೆಯಲಿದೆಯೆಂದು ಮಂದಿರದ ಪದಾಧಿಕಾರಿಗಳಾದ ರತೀಶ್ ಕೆ.ಟಿ, ಅವಿನಾಶ್ ಕೆ, ಜಯ ಮೋನ್ ಕೆ. ತಿಳಿಸಿದ್ದಾರೆ.
