ತಿರುವನಂತಪುರ: ಇಂದು ನಡೆಯಬೇಕಾಗಿದ್ದ ಓಣಂ ಬಂಪರ್ ಲಾಟರಿಯ ಡ್ರಾವನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.
ಜಿಎಸ್‌ಟಿಯಲ್ಲಿ ಕೈಗೊಳ್ಳಲಾಗಿ ರುವ ಸುಧಾರಣಾ ಕ್ರಮ, ಮಳೆ, ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಲಾಟರಿ ಟಿಕೆಟ್ ಮಾರಾಟವನ್ನು ಪೂರ್ತೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡ್ರಾವನ್ನು ಮುಂದೂಡಬೇಕೆಂದು ಲಾಟರಿ ಟಿಕೆಟ್ ಮಾರಾಟ ಏಜೆನ್ಸಿಗಳು ಮತ್ತು ಮಾರಾಟಗಾರರು ಆಗ್ರಹಪಟ್ಟಿದ್ದರು. ಅದನ್ನು ಪರಿಗಣಿಸಿ ಇಂದು ನಡೆಯಬೇಕಾಗಿದ್ದ ಡ್ರಾವನ್ನು ಹಣಕಾಸು ಇಲಾಖೆ ಅ. ೪ಕ್ಕೆ ಮುಂದೂಡಿದೆ.