ತಿರುವನಂತಪುರ: ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಂದಿ ಆಶ್ರಯಿಸುವ ರೈಲುಗಳಾದ ಮಲಬಾರ್, ಮಾವೇಲಿ ಎಕ್ಸ್‌ಪ್ರೆಸ್‌ಗಳಿಗೆ ಹೆಚ್ಚುವರಿ ಕೋಚ್ ಗಳನ್ನು ಮಂಜೂರು ಮಾಡಲಾಗಿದೆ. ಭಾರತೀಯ ರೈಲ್ವೇ ನಿನ್ನೆ ಈ ಪ್ರಧಾನ ತೀರ್ಮಾನವನ್ನು ಘೋಷಿಸಿದೆ. ಬಹಳ ಕಾಲದಿಂದ ಪ್ರಯಾಣಿಕರು ಆಗ್ರಹಿಸುತ್ತಿದ್ದ ವಿಷಯವಾಗಿದೆ ಈಗ ಮಂಜೂರುಗೊಂಡಿರುವುದು. ಮಂಗಳೂರಿನಿಂದ ತಿರುವನಂತಪುರವರೆಗೆ ಸಂಚಾರ ನಡೆಸುವ ಪ್ರಧಾನ ರೈಲುಗಳಾಗಿವೆ ಮಲಬಾರ್, ಮಾವೇಲಿ. ಇವುಗಳಲ್ಲಿ ಒಂದೊಂದು ಹೆಚ್ಚುವರಿ ಕೋಚ್‌ಗಳನ್ನು ಮಂಜೂರು ಮಾಡಲಾಗಿದೆ. ಇಂದಿನಿಂದ ಮಾವೇಲಿ ಎಕ್ಸ್‌ಪ್ರೆಸ್ (16603)ನಲ್ಲಿ ಹೆಚ್ಚುವರಿ ಕೋಚ್ ಚಾಲ್ತಿಗೆ ಬರಲಿದೆ. ತಿರುವನಂತಪುರ-ಮಂಗಳೂರು ಮಾವೇಲಿ ಎಕ್ಸ್‌ಪ್ರೆಸ್ (೧೬೬೦೪) ನಾಳೆಯಿಂದ ಹೆಚ್ಚುವರಿ ಕೋಚ್ ಸಹಿತ ಸಂಚಾರ ನಡೆಸಲಿದೆ. ಬೆಳಿಗ್ಗೆ ಹಾಗೂ ಮುಂಜಾನೆ ರಾಜಧಾನಿಗೆ ತಲುಪುವ ರೈಲುಗಳಾಗಿವೆ ಇವು. ತಿರುವನಂತಪುರಕ್ಕೆ ಪ್ರಯಾಣಿಸುವ ಹೆಚ್ಚಿನ ಮಂದಿಗೆ ಈ ರೈಲುಗಳು ಆಶ್ರಯವಾಗಿದೆ. ಒಂದು ಕೋಚ್ ಹೆಚ್ಚುವರಿ ಮಂಜೂರು ಮಾಡಿದ ಬಳಿಕ ಈಗ ೧೦ ಸ್ಲೀಪರ್ ಕೋಚ್ ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿರುತ್ತದೆ.
ಮಲಬಾರ್ ಎಕ್ಸ್‌ಪ್ರೆಸ್‌ನಲ್ಲೂ ಒಂದು ಕೋಚ್ ಮಂಜೂರು ಮಾಡಿದಾಗ 10 ಕೋಚ್‌ಗಳಾಗಿ ಹೆಚ್ಚಳವಾಗಿವೆ. ಹಲವು ವರ್ಷಗಳ ಹಿಂದೆ ಈ ರೈಲಿನಲ್ಲಿ 1೦ ಸ್ಲೀಪರ್ ಕೋಚ್‌ಗಳು ಇತ್ತು. ಬಳಿಕ ಒಂದನ್ನು ರದ್ದುಗೊಳಿಸಲಾಗಿತ್ತು. ಚೆನ್ನೈ ಎಗ್‌ಮೋರ್ ಮಂಗಳೂರು ಎಕ್ಸ್‌ಪ್ರೆಸ್ ಇಕ್ಕಡೆಗಳ ರೈಲುಗಳಲ್ಲಿ ಒಂದೊಂದು ಕೋಚ್‌ನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದರಲ್ಲಿ 12 ಕೋಚ್‌ಗಳು ಆಗಿವೆ.






