ಅನ್‌ಲೈನ್ ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಓರ್ವ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗದ ಭರವಸೆಯೊಡ್ಡಿ 11 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಸೆರೆಗೀಡಾಗಿದ್ದಾನೆ. ಕಣ್ಣೂರು ಕದಿರೂರು ಪುಳಿಯೋಡ್ ನಿವಾಸಿ ಯಾದ ಸಿ. ವಿನೀಶ್ (39) ಸೆರೆಗೀಡಾದ ವ್ಯಕ್ತಿ. ಇರಿಂಙಾಲಕುಡ ಅವಿಟ್ಟತ್ತೂರು ನಿವಾಸಿ ಆದರ್ಶ್ (32) ಎಂಬವರನ್ನು ಆರೋಪಿ ವಂಚಿಸಿರುವುದಾಗಿ ದೂರ ಲಾಗಿದೆ. ವಾಟ್ಸಪ್ ಮೂಲಕ ಆರೋಪಿ ಯುವಕನನ್ನು ಸಂಪರ್ಕಿಸಿದ್ದನು. ‘ಡಿ.ಡಿ.ಬಿ. ವರ್ಲ್ಡ್ ವೈಡ್ ಮೀಡಿಯಾ ಇಂಡಿಯಾ’ ಎಂಬ ಕಂಪೆನಿಯ ಹೆಸರಲ್ಲಿ ಹೋಟೆಲ್‌ಗಳಿಗೆ ಹಾಗೂ ರೆಸ್ಟೋರೆಂಟ್‌ಗಳಿಗೆ ಸ್ಟಾರ್ ರೇಟಿಂಗ್ ನೀಡುವ ಅನ್‌ಲೈನ್ ಕೆಲಸ ನಿರ್ವಹಿಸಿದರೆ ಹಣ ಸಂಪಾದಿಸ ಬಹುದೆಂದು ನಂಬಿಸಿ ಆರೋಪಿ ವಂಚನೆ ನಡೆಸಿದ್ದಾನೆ.

ವಾಟ್ಸಪ್ ಮೂಲಕ ಸಂದೇಶಗಳನ್ನು ಕಳುಹಿಸಿಯೂ, ಟೆಲಿಗ್ರಾಮ್ ಖಾತೆ ನೀಡಿ ಆರೋಪಿ ಪ್ರೀ ಪೈಡ್ ಟಾಸ್ಕ್ ಗಳನ್ನು ಹಾಗೂ ರಿವ್ಯೂ ಟಾಸ್ಕ್‌ಗಳನ್ನು ಆದರ್ಶ್‌ನ ಮೂಲಕ ನಡೆಸಿದ್ದಾನೆ. ಅನಂತರ ಹಲವು ಕಾರಣಗಳನ್ನು ತಿಳಿಸಿ ಹಲವು ಬಾರಿಯಾಗಿ ಆದರ್ಶ್‌ನ ಕೈಯಿಂದ 5,28,000 ರೂಪಾಯಿ ಗಳನ್ನು ಆರೋಪಿ ತನ್ನ ಬ್ಯಾಂಕ್ ಖಾತೆಗೆ ಪಡೆದುಕೊಂಡಿದ್ದನು. ದೂರುದಾತನ ಹಣದಲ್ಲಿ 58,000 ರೂಪಾಯಿ ವಿನೀಶ್‌ನ ಖಾತೆಗೆ ತಲುಪಿರುವುದಾಗಿ ಪತ್ತೆಹಚ್ಚಲಾದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ವಿನೀಶ್‌ನ ಖಾತೆ ಮೂಲಕ 29,20,000 ರೂಪಾಯಿಗಳ ಕಾನೂನು ವಿರುದ್ಧ ವ್ಯವಹಾರ ನಡೆಸಿ ರುವುದಾಗಿ ಪತ್ತೆಹಚ್ಚಲಾಗಿದೆ. ಹೆಚ್ಚಿನ ಮಂದಿಯನ್ನು ಈತ ಇದೇ ರೀತಿ ವಂಚಿಸಿದ್ದಾನೆಂದು ಸೂಚನೆ ಲಭಿಸಿದೆ. ಆರೋಪಿ ತನ್ನ ಹೊಸ ಸಿಮ್‌ಕಾರ್ಡ್, ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಮೊದಲಾದವುಗಳನ್ನು ಬೇರೊಬ್ಬ ವ್ಯಕ್ತಿಗೆ 10 ಸಾವಿರ ರೂಪಾಯಿ ಕಮಿಶನ್ ಪಡೆದು ಹಸ್ತಾಂತರಿಸಿರುವು ದಾಗಿಯೂ ತಿಳಿದುಬಂದಿದೆ. ಈ ಖಾತೆ ಮೂಲಕ ವಂಚನೆ ನಡೆಸಿದ ಹಣ ಹಸ್ತಾಂತರಿಸುವುದಕ್ಕೆ ಸಂಬಂಧಿಸಿ ವಿವಿಧ ರಾಜ್ಯಗಳಲ್ಲಾಗಿ 14ಪ್ರಕರಣಗಳು ವಿನೀಶ್‌ನ ವಿರುದ್ಧ ದಾಖಲಾಗಿವೆ. ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಕೃಷ್ಣ ಕುಮಾರ್‌ರ ನೇತೃತ್ವದಲ್ಲಿ  ತನಿಖೆ ನಡೆಯುತ್ತಿದೆ.

You cannot copy contents of this page