ಯುವಕನ ಕೊಲೆಗೆ ಯತ್ನಿಸಿದ ಪ್ರಕರಣ ಓರ್ವ ಸೆರೆ

ಕಾಸರಗೋಡು: ಮಧೂರು ಉಳಿಯತ್ತಡ್ಕ ಮೀನು ಮಾರ್ಕೆಟ್ ಬಳಿ ಉಳಿಯತ್ತಡ್ಕ ಪಳ್ಳಂ ಕ್ವಾರ್ಟರ್ಸ್‌ನ ಸತ್ತಾರ್ ಕೆ. (37) ಎಂಬಾತನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಮಧೂರು ಅರಂತೋಡು ನಿವಾಸಿ ಮೊಹಮ್ಮದ್ ಅಫ್ನಾಸ್ (33) ಬಂಧಿತ ಆರೋಪಿ. ಈ ಪ್ರಕರಣದ ಇನ್ನೋರ್ವ ಶಿರಿಬಾರಿಲು ಮಂಜತ್ತಡ್ಕದ ಮೆಹರೂಫ್‌ನನ್ನು ಬಂಧಿಸಲು ಬಾಕಿ ಇದೆ ಎಂದೂ ಆತನ ಪತ್ತೆಗಾಗಿರುವ ಶೋಧಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ ೨೬ರಂದು ಸಂಜೆ ಉಳಿಯತ್ತಡ್ಕ ಮೀನು ಮಾರ್ಕೆಟ್ ಬಳಿ ಸತ್ತಾರ್‌ರನ್ನು ಕಾರು ಢಿಕ್ಕಿ ಹೊಡೆಸಿ ಬೀಳಿಸಿದ ಬಳಿಕ ಮರಕಾಯುಧದಿಂದ ಇರಿದು ಗಾಯಗೊಳಿಸಿದ ಬಗ್ಗೆ ಸತ್ತಾರ್ ನೀಡಿದ ದೂರಿನಂತೆ ಈ ಇಬ್ಬರು ಆರೋಪಿಗಳ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page