ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕದಲ್ಲಿ ಮಾತ್ರ ಮಾರಾಟಗೈಯ್ಯಬಹುದಾದ ಆರು ಲೀಟರ್ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ದ್ದಾರೆ. ಪಚ್ಚಂಬಳದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕಿರಣ್ ಕುಮಾರ್ ಎಚ್ (28) ಎಂಬಾತನನ್ನು ನಿನ್ನೆ ಸಂಜೆ ಹೇರೂರು ಚೋಕೆ ಎಂಬಲ್ಲಿಂದ ಮದ್ಯ ಸಹಿತ ಸೆರೆಹಿಡಿದಿರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ಕುಂಬಳೆ ರೇಂಜ್ ಅಬಕಾರಿ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮಾನಸ್ ಕೆ,  ಸಿಇಒಗಳಾ ದ ಅಖಿಲೇಖ್ ಎಂ, ರಾಹುಲ್ ಇ, ಸೂರ್ಜಿತ್ ಕೆ, ಚಾಲಕ ಪ್ರವೀಣ್ ಕುಮಾರ್ ಎಂಬಿವರು  ಕಾರ್ಯಾ ಚರಣೆ ನಡೆಸಿದ ತಂಡದಲ್ಲಿದ್ದರು.

RELATED NEWS

You cannot copy contents of this page