ಕಾಸರಗೋಡು : ರಾಜ್ಯದೊಳಗಿನ ಹಾಗೂ ಹೊರಗಿನ ಪ್ರಯಾಣದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಯೋಜಕತ್ವವೇ ಎಂದು ಹೇಳಿಕೊಳ್ಳುತ್ತಿರುವ ವಿ.ಡಿ. ಸತೀಶನ್ ಸರ್ಕಾರ ಮಾಫಿಯಾಗಳಿಂದ ಪ್ರಾಯೋಜಿತವಾದ ಆಡಳಿತವಾಗಿ ಮಾರ್ಪಟ್ಟಿದೆಯೇ ಎಂದು ಶಂಕಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ . ಚೀಮೇನಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಿಣರಾಯಿ ವಿಜಯನ್ ಸರ್ಕಾರದ ಅವಧಿಯಲ್ಲಿ ನಡೆದ ಹೆಲಿಕಾಪ್ಟರ್ ವ್ಯವಹಾರದಲ್ಲಿ ಸಂಶಯದ ನೆರಳಿನಲ್ಲಿದ್ದ ಕಂಪನಿಗೇ ಪುನಃ ಗುತ್ತಿಗೆ ನೀಡಲು ಸತೀಶನ್ ಸರ್ಕಾರ ಮುಂದಾಗಿರುವುದು ಎಲïಡಿಎಫ್ – ಯುಡಿಎಫ್ ನಡುವಿನ ಒಳಒಪ್ಪಂದವನ್ನು ಸ್ಪಷ್ಟಪಡಿಸುತ್ತದೆ ಎಂದೂ ಅವರು ಆರೋಪಿಸಿದರು.
ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿಜಯನ್ ಹಾಗೂ ಅಳಿಯ ಮುಹಮ್ಮದ್ ರಿಯಾಸ್ ವಿರುದ್ಧ ಸ್ಪಷ್ಟ ಹಾಗೂ ಬಲವಾದ ಸಾಕ್ಷ್ಯಾಧಾರಗಳು ಹೊರಬಂದಿದ್ದರೂ, ಎಫ್ ಆರ್ ದಾಖಲಿಸದೆ ತನಿಖೆ ನಡೆಸಲು ವಿ.ಡಿ. ಸತೀಶನ್ ಮುಂದಾಗಿರುವುದು ಪಿಣರಾಯಿ ವಿಜಯನ್ ಅವರ ಭ್ರಷ್ಟಾಚಾರಕ್ಕೆ ಯುಡಿಎಫ್ ಬೆಂಬಲ ನೀಡುತ್ತಿರುವುದರ ಸಂಕೇತವಾಗಿದೆ ಎಂದು ಕೃಷ್ಣದಾಸ್ ಆರೋಪಿಸಿದರು.
ಎಡ ಮತ್ತು ಐಕ್ಯರಂಗಗಳ ನಡುವಿನ ಮೈತ್ರಿ ಕೇರಳದಲ್ಲೂ ಬಹಿರಂಗಗೊAಡಿದೆ. ತ್ರಿಪುರ ಮತ್ತು ಬಂಗಾಳದಲ್ಲಿ ಜನತೆ ಸಿಪಿಎಂ ಹಾಗೂ ಕಾಂಗ್ರೆಸ್ಗೆ ನೀಡಿದ ಪಾಠ ಕೇರಳದಲ್ಲೂ ಪುನರಾವರ್ತನೆಯಾಗಲಿದೆ. ಕೇರಳದಲ್ಲಿ ಬಿಜೆಪಿ ಗೆದ್ದಿರುವ ಮೂರು ಸ್ಥಾನಗಳನ್ನು ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿ ನೋಡಬೇಕು ಎಂದೂ ಅವರು ತಿಳಿಸಿದರು.
ಕಾಂತಪುರA ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆಯನ್ನು ಕೇವಲ ಮಹಿಳಾ ವಿರೋಧಿ ಹೇಳಿಕೆಯಾಗಿ ಮಾತ್ರ ನೋಡಲಾಗದು. ಅದು ಮಾತೃರಾಷ್ಟ್ರ ವಿರೋಧಿ ನಿಲುವಾಗಿದೆ ಎಂದು ಕೃಷ್ಣದಾಸ್ ಹೇಳಿದರು. ಮುಸ್ಲಿಂ ಸಂಘಟನೆಗಳು ಒಕ್ಕೊರಲಿನಿಂದ ಅವರನ್ನು ಬೆಂಬಲಿಸಿರುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಇದರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಲು ಸಿಪಿಎಂ ಮತ್ತು ಕಾಂಗ್ರೆಸ್ ಮುಂದಾಗಲಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷವೊಂದಕ್ಕೆ ಅಧಿಕಾರ ಪಡೆಯುವುದು ಮತ್ತು ಅಧಿಕಾರದಲ್ಲಿ ಮುಂದುವರಿಯುವುದು ಮುಖ್ಯವೇ ಆಗಿದ್ದರೂ, ಬಿಜೆಪಿಗೆ ನಿಸ್ವಾರ್ಥ ಸೇವೆ ಹಾಗೂ ಭಾರತದ ಅಭಿವೃದ್ಧಿಯೇ ಪ್ರಮುಖ ಗುರಿಯಾಗಿದೆ ಎಂದು ಕೃಷ್ಣದಾಸ್ ನುಡಿದರು.
ಕಾರ್ಯಕರ್ತರಲ್ಲಿ ಸಮಾಜಕ್ಕಾಗಿ ದುಡಿಯುವ ಪ್ರೇರಣೆ ಹಾಗೂ ಅಗತ್ಯ ತರಬೇತಿಯನ್ನು ನೀಡಲು ಇಂತಹ ಅಧ್ಯಯನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ, ಪಿ.ಕೆ. ವೇಲಾಯುಧನ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್, ಕಣ್ಣೂರು ವ¯ಯ ಅಧ್ಯಕ್ಷ ಅಡ್ವ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ ಚಂದ್ರ ಭಂಡಾರಿ, ಪ್ರಮೀಳಾ ಸಿ. ನಾಯ್ಕ್, ಎ. ವೇಲಾಯುಧನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ಕಣ್ಣೂರು ವ¯ಯ ಉಪಾಧ್ಯಕ್ಷ ವಿಜಯಕುಮಾರ್ ರೈ, ಕುಂಬಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಎನ್. ಯಶೋದಾ, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸುತ್ತಿರುವ ಈ ಶಿಬಿರ ನಾಳೆ ಸಂಜೆ ಸಮಾರೋಪಗೊಳ್ಳಲಿದೆ.







