ಕಾಸರಗೋಡು: ವಿವಿಧ ಕಂಪೆನಿಗಳ ಶೇರ್‌ಗಳನ್ನು ಖರೀದಿಸಿ ಟ್ರೇಡಿಂಗ್ ನಡೆಸಲೆಂದು ತಿಳಿಸಿ 56,10,000 ರೂ. ವಂಚಿಸಿರುವುದಾಗಿ ದೂರಲಾಗಿದೆ. ಚೆಮ್ನಾಡ್, ಚಳಿಯಂಗೋಡು ವಾಲಿವ್ಯೂ ನಿವಾಸಿ ಅಬ್ದುಲ್ ಖಾದರ್ ಕಡವತ್ ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ತನಿಖೆ ಆರಂಭಿಸಿದರು. ಗೂಗಲ್ ಪ್ಲೇಸ್ಟೋರ್‌ನಿಂದ ಐಐಎಫ್‌ಎಲ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ 2025 ಜುಲೈ 2ರಿಂದ ಆಗಸ್ಟ್ 5ರವರೆಗಿರುವ ದಿನಗಳಲ್ಲಿ ವಿವಿಧ ಖಾತೆಗಳಿಗೆ ಹಣ ಪಾವತಿಸುವಂತೆ ಮಾಡಿ ವಂಚನೆ ನಡೆಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಹೇಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲಿರುವ ಯತ್ನ ಮುಂದುವರಿಯುತ್ತಿದೆ.
