ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಚುನಾವಣೆಗಿರುವ ಸಾರ್ವತ್ರಿಕ ಮತದಾರ ಪಟ್ಟಿಯಲ್ಲಿ ಇಂದು ಹಾಗೂ ನಾಳೆ ಹೆಸರು ಸೇರಿಸಲು ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಎ. ಶಾಜಹಾನ್ ತಿಳಿಸಿ ದ್ದಾರೆ. ಮಟ್ಟನ್ನೂರ್ ಪಂಚಾಯತ್ ಹೊರತುಪಡಿಸಿದ ರಾಜ್ಯದ ಇತರ ಪಂಚಾಯತ್ಗಳಲ್ಲಿ ಅಕ್ಟೋಬರ್ ೨೫ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಒಳಗೊ ಳ್ಳದ ಅರ್ಹರಾದವರಿಗೆ ಯಾದಿ ಯಲ್ಲಿ ಹೆಸರು ಸೇರಿಸಲು ಈ ಅವಕಾಶ ನೀಡಲಾಗಿದೆ. ಅನರ್ಹ ರನ್ನು ಹೊರತು ಪಡಿಸುವು ದಕ್ಕೂ, ಸ್ಥಳ ಬದಲಾವಣೆ ಮಾಡಲು ೪, ೫ರಂದು ಅರ್ಜಿ ಸಲ್ಲಿಸ ಬಹುದು. ನ.೧೪ರಂದು ಸಪ್ಲಿಮೆಂಟರಿ ಯಾದಿಯನ್ನು ಪ್ರಕಟಿಸಲಾ ಗುವುದು. ಹೀಗೆ ಪ್ರಕಟಿಸಿದ ಯಾದಿಯ ಪ್ರತಿ ಗಳನ್ನು ಅಂಗೀಕೃತ ರಾಜಕೀಯ ಪಕ್ಷ ಗಳಿಗೆ ಉಚಿತವಾಗಿ ನೀಡಲಾಗುವುದು.







